
12-10-2026, 9:00 PM
ಹೆಜಮಾಡಿ, ಅ. 12: ಯುವವಾಹಿನಿ (ರಿ.) ಹೆಜಮಾಡಿ ಘಟಕದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಹೆಜಮಾಡಿಯ ನಾರಾಯಣಗುರು ಮಂದಿರದಲ್ಲಿ ನವರಾತ್ರಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಭಕ್ತಿಭಾವ ಮತ್ತು ಶ್ರದ್ಧಾಪೂರ್ವಕವಾಗಿ ನೆರವೇರಿತು. ನವರಾತ್ರಿಯ ಎರಡನೇ ದಿನದ ಶುಭ ಸಂದರ್ಭದಲ್ಲಿ ಗುರುಮಂದಿರದಲ್ಲಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಘಟಕದ ಸದಸ್ಯರು ಹಾಗೂ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಪೂಜೆಯ ಬಳಿಕ ಘಟಕದ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಯಿತು. ಭಕ್ತರು ಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಧಾರ್ಮಿಕ ವಾತಾವರಣದಲ್ಲಿ ಭಾಗಿಯಾದರು. […]
Read More

20-08-2026, 8:00 PM
ಹೆಜಮಾಡಿ ಅಗಸ್ಟ್ 20: ಯುವವಾಹಿನಿ (ರಿ.) ಹೆಜಮಾಡಿ ಘಟಕದ ವತಿಯಿಂದ ಶ್ರೀ ನಾರಾಯಣಗುರು ಮಂದಿರದಲ್ಲಿ ಗುರುಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಆ.20ರಂದು ಭಕ್ತಿಭಾವದಿಂದ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಘಟಕದ ವಿವಿಧ ಕಾರ್ಯಕ್ರಮಗಳ ಮುನ್ನುಡಿಯಾಗಿ ಗುರುಪೂಜೆಯನ್ನು ನೆರವೇರಿಸಲಾಯಿತು. ಶ್ರೀ ನಾರಾಯಣಗುರುಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆದು ಘಟಕದ ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಹಾಗೂ ಸಂಘಟನೆಯ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಬಲ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. ಗುರುಪೂಜೆಯ ಬಳಿಕ ಅನ್ನಸಂತರ್ಪಣೆ […]
Read More

15-08-2026, 9:00 AM
ಹೆಜಮಾಡಿ, ಆಗಸ್ಟ್ 15: ಯುವವಾಹಿನಿ (ರಿ.) ಹೆಜಮಾಡಿ ಘಟಕದ ವತಿಯಿಂದ ಹೆಜಮಾಡಿ ಬಿಲ್ಲವರ ಸಂಘದ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮವು ಆಗಸ್ಟ್ 15ರಂದು ನಡೆಯಿತು. ಹೆಜಮಾಡಿ ಬಿಲ್ಲವರ ಸಂಘದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಜನತೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಜವಾಬ್ದಾರಿಯುತ ಹಾಗೂ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಪೋಷಕರು ಮತ್ತು […]
Read More

02-08-2026, 8:00 PM
ಹೆಜಮಾಡಿ, ಆ. 2: ಯುವವಾಹಿನಿ (ರಿ.) ಹೆಜಮಾಡಿ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಹೆಜಮಾಡಿ ಬಿಲ್ಲವರ ಸಂಘ (ರಿ.) ಸಭಾಂಗಣದಲ್ಲಿ ಘಟಕದ ಅಧ್ಯಕ್ಷ ನಿಶಾಂಕ್ ಎಸ್. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಹೆಜಮಾಡಿ ಬಿಲ್ಲವರ ಸಂಘ (ರಿ.) ಅಧ್ಯಕ್ಷ ಮೋಹನ್ ದಾಸ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯು ಸಮಾಜಮುಖಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ […]
Read More

02-08-2026, 8:00 PM
ಹೆಜಮಾಡಿ ಅಗಸ್ಟ್ 02 : ಯುವವಾಹಿನಿ (ರಿ) ಹೆಜಮಾಡಿ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಪ್ರಥಮೇಶ್ ಪಿ ಬಂಗೇರ ಆಯ್ಕೆಯಾಗಿದ್ದರೆ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರು : ಪ್ರಥಮೇಶ್ ಪಿ. ಬಂಗೇರಪ್ರಥಮ ಉಪಾಧ್ಯಕ್ಷರು : ಜಯಶ್ರೀ ಸದಾಶಿವದ್ವಿತೀಯ ಉಪಾಧ್ಯಕ್ಷರು : ಪ್ರಾಪ್ತಿ ಆರ್ ಸುವರ್ಣಕಾರ್ಯದರ್ಶಿ : ದೀಕ್ಷಿತ್ ಸಿ. ಪೂಜಾರಿಜೊತೆ ಕಾರ್ಯದರ್ಶಿ : ಸುರೇಖಾ ಆನಂದ್ಕೋಶಾಧಿಕಾರಿ : ವಿಶ್ವೇಶ್ ಪೂಜಾರಿ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಅವಿನ್ ಎ. ಪೂಜಾರಿಕ್ರೀಡೆ ನಿರ್ದೇಶಕರು : […]
Read More

21-06-2026, 11:00 PM
ಹೆಜಮಾಡಿ, ಜೂನ್ 21 : ಹಿರಿಯ ಸಾಹಿತಿ, ನಾಟಕಕಾರ, ಗೀತಾ ಸಾಹಿತ್ಯ ರಚನಾಕಾರ ಹಾಗೂ ಪತ್ರಕರ್ತರಾದ ಪರಮಾನಂದ ವಿ. ಸಾಲ್ಯಾನ್ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಯುವವಾಹಿನಿ (ರಿ.) ಹೆಜಮಾಡಿ ಘಟಕವು ಮಾನವೀಯ ಕಾಳಜಿಯಿಂದ ನೆರವಿನ ಹಸ್ತ ಚಾಚಿದೆ. ಮೂಲತಃ ಹೆಜಮಾಡಿ ಗ್ರಾಮದವರಾದ ಪರಮಾನಂದ ವಿ. ಸಾಲ್ಯಾನ್ ಅವರು ಹೆಜಮಾಡಿ ಬಿಲ್ಲವರ ಸಂಘ ಹಾಗೂ ಯುವವಾಹಿನಿಯ ವಿವಿಧ ಚಟುವಟಿಕೆಗಳಿಗೆ ಹಲವು ವರ್ಷಗಳಿಂದ ಅಮೂಲ್ಯ […]
Read More

07-06-2026, 7:00 PM
ಹೆಜಮಾಡಿ : ಯುವವಾಹಿನಿ (ರಿ.) ಹೆಜಮಾಡಿ ಘಟಕದ ವತಿಯಿಂದ ಜೂನ್ 7ರಂದು 51 ಸದಸ್ಯರೊಂದಿಗೆ ಕುಂದಾಪುರದ UVA ಮೆರಿಡಿಯನ್ ವಾಟರ್ ಪಾರ್ಕ್ಗೆ ಒಂದು ದಿನದ ಸೌಹಾರ್ದಯುತ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಪ್ರವಾಸವು ಗುರುಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆರಂಭಗೊಂಡಿತು. ಬಳಿಕ ಸದಸ್ಯರೆಲ್ಲರೂ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಅನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ದರ್ಶನದಲ್ಲಿ ಭಾಗವಹಿಸಿದರು. ಪ್ರವಾಸದ ಮಧ್ಯೆ ಸದಸ್ಯರಿಗಾಗಿ ಉಪಹಾರದ ವ್ಯವಸ್ಥೆ […]
Read More

09-05-2026, 9:00 PM
ಹೆಜಮಾಡಿ: ಯುವವಾಹಿನಿ (ರಿ.) ಹೆಜಮಾಡಿ ಘಟಕ ಹಾಗೂ ಹೆಜಮಾಡಿ ಬಿಲ್ಲವರ ಸಂಘದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶನಿಪೂಜೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಹಾಗೂ ಕೋಶಾಧಿಕಾರಿಯಾದ ಸತೀಶ್ ಕಿಲ್ಪಾಡಿ ಅವರು ಭಾಗವಹಿಸಿ ಶುಭ ಹಾರೈಸಿದರು. ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು. ಸಾರ್ವಜನಿಕ ಶನಿಪೂಜೆಯಲ್ಲಿ […]
Read More

09-05-2026, 8:00 PM
ಹೆಜಮಾಡಿ : ಯುವವಾಹಿನಿ(ರಿ.) ಹೆಜಮಾಡಿ ಘಟಕದ ಆಶ್ರಯದಲ್ಲಿ ಹರೀಶ್ ಶಾಂತಿ ಹೆಜಮಾಡಿ ಇವರ ಪೌರೋಹಿತ್ಯದಲ್ಲಿ 28 ನೇ ವರ್ಷದ ಸಾರ್ವಜನಿಕ ಶನಿಪೂಜೆ ಮತ್ತು ಭಾಸ್ಕರ್. ಕೆ. ಪಡುಬಿದ್ರಿ ಇವರ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಹೆಜಮಾಡಿ ನಾರಾಯಣಗುರು ಮಂದಿರದಲ್ಲಿ ದಿನಾಂಕ:09-05-2026 ರಂದು ಆದಿತ್ಯವಾರ ಜರಗಿತು.ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮತ್ತು ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು.
Read More

17-03-2026, 9:00 PM
ಹೆಜಮಾಡಿ: ಯುವವಾಹಿನಿ (ರಿ.) ಹೆಜಮಾಡಿ ಘಟಕದ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ “ಸ್ತ್ರೀ ಸ್ಪೂರ್ತಿ–2026” ಕಾರ್ಯಕ್ರಮವು ಮಾರ್ಚ್ 17 ರಂದು ಹೆಜಮಾಡಿ ಬಿಲ್ಲವರ ಸಂಘದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ವೇತ ಪಳ್ಳಿ ಮಾತನಾಡಿ, “ಮಹಿಳೆಯರು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಳ್ಳಬೇಕು. ಅದಕ್ಕಾಗಿ ದೃಢ ಮನೋಬಲ ಅತ್ಯಂತ ಅಗತ್ಯ” ಎಂದು ಅಭಿಪ್ರಾಯಪಟ್ಟರು. “ನನ್ನ ಸಾಧನೆಗೆ ಯುವವಾಹಿನಿಯೇ ಸ್ಪೂರ್ತಿ. ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬೇಕು” ಎಂದೂ ಅವರು ತಿಳಿಸಿದರು. ಕಾರ್ಯಕ್ರಮವು ಹೆಜಮಾಡಿ […]
Read More