
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ವತಿಯಿಂದ ಇಡ್ಯಾ ವಿಠೋಬ–ರುಕುಮಾಯಿ ಮಂದಿರದ ಜೀರ್ಣೋದ್ಧಾರದ ಸಂಧರ್ಭದಲ್ಲಿ ದಿನಾಂಕ 13.12.2025ರಂದು ರೂ. 10,000 ಮೊತ್ತದ ನೆರವನ್ನು ಮಂದಿರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದು, ಮಂದಿರದ ಆಡಳಿತ ಮಂಡಳಿ ಸದಸ್ಯರಿಗೆ ಸಹಾಯಧನವನ್ನು ಹಸ್ತಾಂತರಿಸಿದರು. ಸಮಾಜ ಸೇವೆಯ ಭಾಗವಾಗಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ಈ ನೆರವು ನೀಡಲಾಗಿದೆ ಎಂದು ತಿಳಿಸಲಾಯಿತು.


