2015-16 ರ ಸಾಲಿನ CBSE 10 ೦ನೇ ತರಗತಿ ಪರೀಕ್ಷೆಯಲ್ಲಿ ಉದ್ಯಾವರ ಪ್ರತಾಪ್ ಕುಮಾರ್ 10 ಕ್ಕೆ 10 ಗ್ರೇಡ್ ಅಂಕ ಗಳಿಸಿರುತ್ತಾನೆ. ವಿಜ್ಞಾನ ಮಾದರಿಯಲ್ಲಿ ರಾಜ್ಯ ಮಟ್ಟದ ಪ್ರದರ್ಶನ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ನಲ್ಲಿ ವಿಶಿಷ್ಟ ಶ್ರೇಣಿ, ಅಂತರ ಶಾಲಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ ಈತ ಕಾಲ್ಚೆಂಡು ಆಟಗಾರ ಕೂಡ.
ಶಾಲೆಯಲ್ಲಿ ಪ್ರಬಂಧ, ಭಾಷಣ, ಹಾಡುಗಾರಿಕೆ, ಛದ್ಮವೇಷ, ವಿಜ್ಞಾನ ಮಾದರಿ, ಗೂಡುದೀಪ ತಯಾರಿಕೆ, ರಂಗೋಲಿ, ಹೂ ಜೋಡಣೆ, ಕರಕುಶಲ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಗಳಿಸಿರುವ ಈತ ಪ್ರತಿಭೆ ಉಕ್ಕಿ ಹರಿವ ಪ್ರತಿಭಾ ಕಾರಂಜಿಯೇ ಸರಿ. ಹೃತ್ವಿಕ್ ಕುಮಾರ್ಗೆ ಯುವವಾಹಿನಿಯು ಅಕ್ಷರ ಪುರಸ್ಕಾರ ನೀಡಿ ಗೌರವಿಸಲು ತುಂಬಾ ಸಂತೋಷ ಪಡುತ್ತದೆ.
Really proud of u Mr.Rithwik kumar