ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 25-09-2024 ಬುಧವಾರದಂದು ನಡೆದ ವಾರದ ಸಭೆಯಲ್ಲಿ ಜೀವ ವಿಮೆ ಹಾಗೂ ಆರೋಗ್ಯ ವಿಮೆಯ ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ L.I. C ಅಡ್ವೈಸರ್ ಶ್ರೀಮತಿ ಪ್ರಶೋಭ , ಶ್ರೀಮತಿ ಯಶೋಧ ಹಾಗೂ ಡೆವಲಪ್ಮೆಂಟ್ ಆಫೀಸರ್ ಕೆ. ಆರ್.ಬಾಲಕೃಷ್ಣ ಆಗಮಿಸಿದ್ದರು. ಇವರನ್ನು ಹೂ ಕೊಟ್ಟು ಸಭೆಗೆ ಸ್ವಾಗತಿಸಲಾಯಿತು.
ಪ್ರತಿಯೊಬ್ಬರೂ ಜೀವ ವಿಮೆ ಮಾಡಬೇಕು. ಜೀವ ವಿಮೆ ನಮಗೆ ಅತೀ ಮುಖ್ಯ. ಆರೋಗ್ಯ ಮತ್ತು ಜೀವ ವಿಮೆ ಎಂಬ ಎರಡು ವಿಮೆಯ ಬಗ್ಗೆ ಮಾಹಿತಿಯನ್ನು ಮುಖ್ಯ ಅತಿಥಿ ಸಭೆಗೆ ತಿಳಿಸಿದರು. ಪ್ರತಿಯೊಬ್ಬರು ಒಂದು ಸಣ್ಣ ವಿಮೆಯಾದರೂ ಮಾಡಬೇಕು. ಅವರವರ ಸಾಮರ್ಥ್ಯದ ಮೇರೆಗೆ ವಿಮೆ ಮಾಡಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ದೀಕ್ಷಿತ್ ಸಿ ಎಸ್ ಬಂದ ಅತಿಥಿಗಳನ್ನು ಗೌರವಿಸಿದರು.
ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ , ದೀಕ್ಷಿತ್ ಸಿ ಎಸ್, ಕಾರ್ಯದರ್ಶಿ ನಯನ ಕೋಟ್ಯಾನ್, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸರಸ್ವತಿ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.