ಮಂಗಳೂರು : ಕಂಕನಾಡಿ ಘಟಕದ ಸದಸ್ಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 04-08-2024ನೇ ಆದಿತ್ಯವಾರ ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಘಟಕದ ಕಚೇರಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಮಾನ್ಯ ಸುಂದರ್ ಸುವರ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 14 ಜನ ಸದಸ್ಯರು ಏಳು ತಂಡವಾಗಿ ಭಾಗವಹಿಸಿದ್ದರು ಹಾಗೂ ತೀರ್ಪುಗಾರರಾಗಿ ಕೊಡಿಯಲ್ ಬೈಲ್ ಶಾರದ ವಿದ್ಯಾಲಯದ ಶಿಕ್ಷಕಿ ಉಜ್ವಲ್ ಹಾಗೂ ಅಂಚನ್ ಕ್ಯಾಟರಿಂಗ್ ಇದರ ಮೇಲ್ವಿಚಾರಕರಾದ ಅಶೋಕ್ ಆಗಮಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಅಮೀನ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಹೂ ನೀಡಿ ಅಭಿನಂದಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು. ಅಂತಿಮವಾಗಿ ಕಾರ್ಯಕ್ರಮದ ಸಂಚಾಲಕತ್ವವನ್ನು ವಹಿಸಿಕೊಂಡ ಯಶ್ವಿತ್ ಧನ್ಯವಾದ ನೀಡಿದರು. ಉಪಾಹಾರದ ವ್ಯವಸ್ಥೆಯನ್ನು ಮಾಜಿ ಅಧ್ಯಕ್ಷರಾದ ಗೋಪಾಲ್. ಎಂ. ಪೂಜಾರಿ ಮಾಡಿದ್ದರು.