Yuvavahini

JUL 07, 2024 4.54 PM IST

ಯುವವಾಹಿನಿ(ರಿ.) ಅಡ್ವೇ ಘಟಕ

ಕೆಸರ್ಡ್ ಒಂಜಿ ದಿನ

ಅಡ್ವೇ: ಯುವವಾಹಿನಿ (ರಿ) ಅಡ್ವೇ ಘಟಕದ ವತಿಯಿಂದ ದಿ 07-07-2024 ರವಿವಾರದಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದೇವರ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೇಯ ಪ್ರಧಾನ ಅರ್ಚಕರು ಸದಾನಂದ ಪೂಜಾರಿ ಹಾಗೂ ರಾಮ ಪೂಜಾರಿ ಅಡ್ವೇ ಗರಡಿ ಮನೆರವರ ಅಮೃತ ಹಸ್ತದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಾದಗೈದರು.

ಯುವವಾಹಿನಿ (ರಿ) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಭಾರತಿ ಭಾಸ್ಕರ್ ಅತಿಥಿ ನುಡಿಗೈದರು. ದೇವರ ತೀರ್ಥ ಪ್ರಸಾದ ಎಳನೀರು, ಹಾಲನ್ನು ಭೂಮಿಗೆ ಅರ್ಪಿಸುವುದರ ಮುಖಾಂತರ ಕೆಸರುಗದ್ದೆ ಸಂಪ್ರದಾಯಕವಾಗಿ ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ಉದ್ಘಾಟಕರಾಗಿ ಸದಾನಂದ ಪೂಜಾರಿ, ರಾಮ ಪೂಜಾರಿ ಅಡ್ವೇ ಗರಡಿ ಮನೆ, ನವೀನ್ ಚಂದ್ರ ಸುವರ್ಣ, ಭಾರತಿ ಭಾಸ್ಕರ್, ಸಂತೋಷ್ ಪೂಜಾರಿ, ಘಟಕದ ಅಧ್ಯಕ್ಷರು ಸಚಿನ್ ಕರ್ಕೇರಾ, ಕಾರ್ಯದರ್ಶಿ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.

ಪುರುಷರಿಗೆ ಹಾಗೂ ಮಹಿಳೆಯರಿಗೆ ಓಟದ ಸ್ಪರ್ಧೆಗಳು, ಉಪ್ಪು ಮೂಟೆ, ಹಾಳೆ ಓಟ,ರಿಲೇ, ನಿಧಿ ಶೋಧ, ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ ಗಂಜಿ ಊಟ ಹಾಗೂ ಮುಸ್ಸಂಜೆ ಹೊತ್ತಿಗೆ ಚಾ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ಯುವವಾಹಿನಿಯ ಇತರ ಘಟಕಗಳಿಂದ ಹಾಗೂ ಊರ ಪರ ಊರ ಅನೇಕ ಆಮಂತ್ರಿತ ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಎಲ್ಲಾ ಸ್ಪರ್ಧೆಗಳು ಅಂತಿಮ ಸುತ್ತು ಮುಗಿದ ನಂತರ ಗದ್ದೆಗೆ ನಾಟಿ ಮಾಡುವ ಪದ್ಧತಿಯು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೀಯವಾಗಿತ್ತು.

ಸಮಾರೋಪ ಸಮಾರಂಭವು ಸಚಿನ್ ಎಸ್ ಕರ್ಕೇರರವರ ಅಧ್ಯಕ್ಷತೆಯಲ್ಲಿ ಆರಂಭವಾಗಿ ವೇದಿಕೆಯಲ್ಲಿದ್ದ ಅತಿಥಿಗಳನ್ನು ಸರ್ವರನ್ನು ಅಧ್ಯಕ್ಷರು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ನಮ್ಮ ಯುವವಾಹಿನಿ (ರಿ ) ಅಡ್ವೇ ಘಟಕದ ಹತ್ತು ವರ್ಷದ ಸಾರ್ಥಕ ಪಯಣದ ಕುರಿತು ಘಟಕದ ಸ್ಥಾಪಕ ಅಧ್ಯಕ್ಷರು ಅದ ನಿತೇಶ್ ಜಯ ಕರ್ಕೆರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರಾದ ಹರೀಶ್ .ಕೆ. ಪೂಜಾರಿರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮ ಹಾಗೂ ಇನ್ನಿತರ ಶಿಸ್ತು ಬದ್ಧ ಕಾರ್ಯವೈಖರಿಯಲ್ಲಿ ಈ ಗ್ರಾಮೀಣ ಭಾಗದಲ್ಲಿ ಅಡ್ವೇ ಘಟಕವು ಮುಂಚೂಣಿಯಲ್ಲಿರುವಂತಹ ಘಟಕವಾಗಿದೆ ಎಂದು ಶ್ಲಾಘಿಸಿದರು. ಅತಿಥಿಯಾಗಿ ಆಗಮಿಸಿದ ಧನಲಕ್ಷ್ಮಿ ಟ್ರೇಡರ್ಸ್ ಫಲಿಮಾರು ಇಲ್ಲಿಯ ಮಾಲಕರು ದಿನೇಶ್ ಪ್ರಭು, ಈ ಕಾರ್ಯಕ್ರಮ ಯುವಕರನ್ನೆಲ್ಲ ಇನ್ನು ಮುಂದೆಯೂ ಹೀಗೆಯೇ ಸಮಾಜಮುಖಿ ಕಾರ್ಯಕ್ರಮವನ್ನು ಮುಂದುವರಿಸಲು ಮಾದರಿಯಾಗಲಿ ಎಂದು ಆಶಿಸಿದರು. ಗೌರವ ಸಲಹೆಗಾರರು ನವೀನ್ ಚಂದ್ರ ಸುವರ್ಣರವರು ಅಡ್ವೇ ಯುವ ವಾಹಿನಿ ಘಟಕ ಕಳೆದ 9 ವರ್ಷದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಈ ಬಾರಿ ಹತ್ತನೇ ವರ್ಷಕ್ಕೆ ಈ ತುಳುವ ಮಣ್ಣಿನ ಬಗ್ಗೆ ಆಚಾರ ವಿಚಾರ ತೋರ್ಪಡಿಸುವ ಕೆಸರ್ಡ್ ಒಂಜಿ ದಿನ, ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ. ಯುವಕರು ಮುಂದೆಯೂ ಇದೇ ರೀತಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹಿತವಚನ ನುಡಿದರು.

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರು ಸಂತೋಷ್ ಎಸ್ ಪೂಜಾರಿ ಈ ರೀತಿಯ ಅದ್ಭುತ ಶಿಸ್ತುಬದ್ಧ ಕಾರ್ಯಕ್ರಮಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಕಬಡ್ಡಿ ತರಬೇತುದಾರ, ವಾಲಿಬಾಲ್ ಆಟಗಾರ, ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳ ಓಟಗಾರ ಘಟಕದ ಸಕ್ರಿಯ ಸದಸ್ಯರು ದಿನೇಶ್ ಪಲಿಮಾರು ಹಾಗೂ ವಾಲಿಬಾಲ್, ತ್ರೋಬಾಲ್ ತರಬೇತುದಾರರು, ಕ್ರೀಡಾಪಟು ಪ್ರಸ್ತುತ ಪಾವಂಜೆ ಶ್ರೀ ವಾಣಿ ಶಾಲೆಯ ದೈಹಿಕ ಶಿಕ್ಷಕಿ ಅಕ್ಷತಾ ಶೆಟ್ಟಿ ಅಡ್ವೇ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

ಕ್ರೀಡೆಯಲ್ಲಿ ಅಚ್ಚುಕಟ್ಟಾದ ತೀರ್ಪುಗಾರಿಕೆ ನೀಡಿದಂತಹ ತೀರ್ಪುಗಾರರು ಸುರೇಶ್ ಉಚ್ಚಿಲ ಹಾಗೂ ಅಕ್ಷತಾ ಶೆಟ್ಟಿ ಅಡ್ವೇರವರನ್ನು ಗೌರವಿಸಲಾಯಿತು. ಸ್ಥಳಾವಕಾಶ ನೀಡಿದ ಗದ್ದೆಯ ಮಾಲಕರು ಹಾಗೂ ಉತ್ತಮ ರೀತಿಯಲ್ಲಿ ಎಲ್ಲಾ ಕೆಲಸ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಂತಹ ಘಟಕದ ಸಕ್ರಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಕ್ರೀಡೆಯಲ್ಲಿ ಭಾಗವಹಿಸಿ ವಿಜಯಿಯಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಘಟಕದ ಸದಸ್ಯರು ಪ್ರಸಾದ್ ಫಲಿಮಾರು ಬಹುಮಾನದ ಪಟ್ಟಿಯನ್ನು ವಾಚಿಸಿದರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಅಡ್ವೇ ಘಟಕದ ಅಧ್ಯಕ್ಷರು ಸಚಿನ್ ಕರ್ಕೇರ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್ ಕೆ ಪೂಜಾರಿ, ಧನಲಕ್ಷ್ಮಿ ಟ್ರೇಡರ್ಸ್ ಪಲಿಮಾರು ಮಾಲಕರು ದಿನೇಶ್ ಪ್ರಭು, ಫಲಿಮಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೇ ಪ್ರಧಾನ ಕಾರ್ಯದರ್ಶಿ ಘಟಕದ ಗೌರವ ಸಲಹೆಗಾರರು ನವೀನ್ ಚಂದ್ರ ಸುವರ್ಣ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಕ್ರೀಡಾ ನಿರ್ದೇಶಕರು ಸಂತೋಷ್ ಪೂಜಾರಿ, ಕಾರ್ಯದರ್ಶಿ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.

ಪ್ರಸಾದ್ ಫಲಿಮಾರು ಹಾಗೂ ನಿತೇಶ್ ಜೆ ಕರ್ಕೇರ ಕೆಸರುಗದ್ದೆಯಲ್ಲಿ ವೀಕ್ಷಕ ವಿವರಣೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಸಲಹೆಗಾರರು, ಪದಾಧಿಕಾರಿಗಳು, ಮಹಿಳಾ ಸಂಘಟಕರು ಹಾಗೂ ಸರ್ವ ಸದಸ್ಯರು ಭಾಗವಹಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಡ್ವೇ ಘಟಕದ ಕೆಸರ್ಡ್ ಒಂಜಿದಿನ ಕಾರ್ಯಕ್ರಮವು ಜನಸಾಮಾನ್ಯರ ಮಾತಿನಲ್ಲಿ ಪ್ರಶಂಸೆಗೆ ಪಾತ್ರವಾಯಿತು.

ಶರತ್ ಅಡ್ವೇ ಕಾರ್ಯಕ್ರಮ ನಿರೂಪಣೆಗೈದರು.ನೂತನ ಘಟಕದ ಕಾರ್ಯದರ್ಶಿ ರವೀಂದ್ರ ಪೂಜಾರಿ ಧನ್ಯವಾದ ಸಮರ್ಪಣೆಗೈದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!