ಹಳೆಯಂಗಡಿ: ಯುವವಾಹಿನಿ(ರಿ.) ಹಳೆಯಂಗಡಿ ಘಟಕ, ಬಿಲ್ಲವ ಸಮಾಜ ಸೇವಾ ಸಂಘ, ಹಳೆಯಂಗಡಿ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್, ಹಳೆಯಂಗಡಿ ಜಂಟಿ ಆಶ್ರಯದಲ್ಲಿ ಹತ್ತನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 21-06-2024 ರಂದು ಹಳೆಯಂಗಡಿ ಬಿಲ್ಲವ ಭವನದಲ್ಲಿ ಯೋಗ ಗುರುಗಳು ಯಾದವ ದೇವಾಡಿಗರ ಮಾರ್ಗದರ್ಶನದಲ್ಲಿ ಜರಗಿತು.
ಯೋಗ ಗುರುಗಳು ಯೋಗದ ಮಹತ್ವ ಹಾಗೂ 2024 ರ ವಿಷಯವಾದ ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷರು ಗಣೇಶ್ ಜಿ. ಬಂಗೇರ, ಕಟ್ಟಡ ಸಮಿತಿ ಅಧ್ಯಕ್ಷರು ಮೋಹನ್ ಸುವರ್ಣ, ಯುವವಾಹಿನಿ(ರಿ.) ಹಳೆಯಂಗಡಿ ಅಧ್ಯಕ್ಷರು ಹಿತಾಕ್ಷಿ ನಾರಾಯಣ್ ಹಾಗೂ ಲಯನ್ಸ್ ಮತ್ತು ಲಯೋಕ್ಲಬ್ ಅಧ್ಯಕ್ಷರು ದಾಮೋದರ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟಡ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಸಾಲಿಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.