ಮಂಗಳೂರು: ಕೆಂಜಾರು – ಕರಂಬಾರು ಘಟಕದ ವತಿಯಿಂದ 2 ದಿವಸದ ಮಂತ್ರಾಲಯ ಕ್ಷೇತ್ರ ದರ್ಶನ ರಾಯರ ಕೃಪೆಯಿಂದ ಯಶಸ್ವಿಯಾಗಿ ನೆರವೇರಿತು. ದಿನಾಂಕ 25-05-2024 ಶನಿವಾರ 3 ಗಂಟೆಗೆ ಬಸ್ ನಲ್ಲಿ ಹೊರಟ ತಂಡ 26-05-24 ಆದಿತ್ಯವಾರ ಬೆಳಿಗ್ಗೆ ಕ್ಷೇತ್ರ ತಲುಪಿತು. ಮೊದಲೇ ಕಾಯ್ದಿರಿಸಿದ ವಸತಿ ಗೃಹಗಳಲ್ಲಿ ಸ್ನಾನ, ಶೌಚಾದಿಗಳನ್ನು ಮುಗಿಸಿ ರಾಯರ ದರ್ಶನ ಪಡೆದು, ಮಂಚಾಲಮ್ಮನಿಗೆ ಕೈ ಮುಗಿದು ಬೆಳಿಗ್ಗೆನ ಉಪಹಾರ ಮುಗಿಸಿ 35 ಅಡಿ ಎತ್ತರದ ಅಭಯಾಂಜನೇಯ ದೇವರಿಗೆ ಕೈ ಮುಗಿದು, ಪಂಚಮುಖಿ ಆಂಜನೇಯನ ದರ್ಶನ ಪಡೆದು, ಲಕ್ಷ್ಮೀ ದೇವಸ್ಥಾನಕ್ಕೆ ಬೇಟಿ ನೀಡಿ ಅಲ್ಲಿಂದ ರಾಯರ ಏಕ ಶಿಲಾ ಬೃಂದಾವನದ ದರ್ಶನ ಪಡೆದು , ಬಿಚ್ಚಾಲಮ್ಮ ದೇವಿಗೆ ಕೈ ಮುಗಿದು ಮರಳಿ ಮಂತ್ರಾಲಯಕ್ಕೆ ಬಂದು ಅನ್ನ ಪ್ರಸಾದ ಸ್ವೀಕರಿಸಿ, ಸಂಜೆ 5 ಗಂಟೆಗೆ ಪ್ರಯಾಣ ಮುಂದುವರಿಸಿ ಸೋಮವಾರ ಬೆಳಿಗ್ಗೆ 6 ಗಂಟೆಗೆ ಕರಂಬಾರು ತಲುಪಿದೆವು. ಒಟ್ಟು 30 ಮಂದಿ ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು