ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕವು ಪ್ರತಿ ವರುಷ ಆಚರಿಸಿಕೊಂಡು ಬರುತ್ತಿರುವ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಈ ವರುಷ ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷರಾದ ಉಷಾ ಸುವರ್ಣ ಇವರ ತಾಯಿಯಾದ 83 ವರುಷದ ರಾಜಮ್ಮ ಇವರನ್ನು ದಿನಾಂಕ 09-03-2024 ನೇ ಶನಿವಾರ ಇವರ ಮನೆಗೆ ತೆರಳಿ ಶಾಲು ಹೊದಿಸಿ, ಕೇಕ್ ಕತ್ತರಿಸಿ, ಆರತಿ ಬೆಳಗುದರ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ರಾಜಮ್ಮ ಅವರ ಮಕ್ಕಳಾದ ಯಾದವ ಸುವರ್ಣ, ಯಶವಂತ ಸುವರ್ಣ, ಉಷಾ ಸುವರ್ಣ, ಆಶಾ ಸುವರ್ಣ, ಮತ್ತು ಮೊಮ್ಮಕ್ಕಳು ಜೊತೆಗಿದ್ದರು.
ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಮಾಧವ ಸಾಲಿಯಾನ್, ಅಧ್ಯಕ್ಷರಾದ ನಿರಂಜನ್ ಕರ್ಕೇರ, ಕಾರ್ಯದರ್ಶಿ ಶ್ರೀಮತಿ ರೋಹಿಣಿ ರಾಜೇಶ್, ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಸಂದ್ಯಾ ಕುಳಾಯಿ, ಚಂದ್ರಶೇಖರ್, ದೇವರಾಜ್ ಅಮೀನ್, ವಿನೋಧರ ಪೂಜಾರಿ, ಉಪಾಧ್ಯಕ್ಷರಾದ ರೇಣುಕಾ ಶೇಖರ್, ಪದಾಧಿಕಾರಿಗಳಾದ ಚಿತ್ತರಂಜನ್, ರೋಹಿತ್ ಪೂಜಾರಿ, ಪೂಜಾ ಕಿರಣ್, ಶರ್ಮಿಳಾ ಚಂದ್ರಶೇಖರ್, ಸುಚಿತಾ ದೇವರಾಜ್, ಸಂಧ್ಯಾ ಸುನಿಲ್, ವಿಜಯ ಮಾಧವ್, ಪೂಜಾ ಕಿರಣ್, ಸುನಿತಾ ವಿನೋದರ್, ಕು.ಆದ್ಯಾ, ಬೇಬಿ ನಿವಿಷಾ, ಬೇಬಿ ತನ್ವಿಷಾ, ಮಾ. ಸಿದ್ಧಾಂತ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀಯುತ ಚಂದ್ರಶೇಖರ ಪೂಜಾರಿ ಸ್ವಾಗತಿಸಿ, ಕಾರ್ಯ ಕ್ರಮದ ನಿರೂಪಣೆ ಗೈದರು, ಕೊನೆಯಲ್ಲಿ ಉಷಾ ಸುವರ್ಣ ಧನ್ಯವಾದಗೈದರು.