ಕೂಳೂರು: ವಾಮಾಂಜೂರು ಕೆತ್ತಿಕಲ್ ನಿವಾಸಿ ಲಕ್ಷ್ಮೀ, 85 ವರ್ಷ ಇವರು ತುಂಬಾ ಅನಾರೋಗ್ಯದಿಂದ ಇದ್ದು, ಅವರ ಗಂಡು ಮಕ್ಕಳು ತೀರಿ ಹೋಗಿದ್ದಾರೆ. ಒಬ್ಬ ಹೆಣ್ಣು ಮಗಳು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಕುಟುಂಬ ತುಂಬಾ ಕಷ್ಟದಲ್ಲಿ ಇದ್ದು, ನಮ್ಮ ಘಟಕದ ನೆರವು ಕೋರಿದ್ದರು. ಅವರಿಗೆ ನಮ್ಮ ಯುವವಾಹಿನಿ (ರಿ.) ಕೂಳೂರು ಘಟಕದ ಸೇವಾನಿಧಿ ಯೋಜನೆಯಡಿಯಲ್ಲಿ 10,000/- ಸಹಾಯಧನವನ್ನು ನೀಡಲಾಯಿತು.
ಮೂಡುಶೆಡ್ಡೆ ನಿವಾಸಿ ಯಶ್ವಿರಾಜ್ ಇವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, A.J ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರು. ಇವರ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬಕ್ಕೆ ಕಷ್ಟವಾಗಿದ್ದು ನಮ್ಮ ಘಟಕದ ಸಹಾಯ ಕೋರಿದ್ದರು. ಇವರಿಗೆ ಸೇವಾ ನಿಧಿ ಯೋಜನೆಯಡಿಯಲ್ಲಿ 15,000/- ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ ಎಸ್, ನಿಕಟಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಪ್ರಥಮ ಉಪಾಧ್ಯಕ್ಷರಾದ ಲತೀಶ್ ಪೂಜಾರಿ, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ಶ್ರೀಮತಿ ನಯನ ಕೋಟ್ಯಾನ್, ಸಮಾಜ ಸೇವಾ ನಿರ್ದೇಶಕರಾದ ಶ್ರೀಮತಿ ಜಯಲಕ್ಷ್ಮಿ, ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.