ಭಜನೆಗಳು ಆರಾಧನೆಯ ಶ್ರೇಷ್ಠ ರೂಪ. ಭಜನೆಗಳು ನಮ್ಮ ಕೃತಜ್ಞತೆ ಮತ್ತು ದೇವರ ಮೇಲಿನ ಪ್ರೀತಿಯನ್ನು ತೋರಿಸಲು ಹಾಡುವ ಹಾಡುಗಳಾಗಿವೆ. ಭಕ್ತಿಗೀತೆಗಳನ್ನು ಹಾಡುವುದು ಅಥವಾ ಕೇಳುವುದು ಒಬ್ಬರ ಮನಸ್ಸಿನಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ ಮತ್ತು ಒಬ್ಬರ ಹೃದಯದಲ್ಲಿ ಸಂತೋಷ, ಶಾಂತಿ ಮತ್ತು ಸಂತೃಪ್ತಿಯನ್ನು ತುಂಬುತ್ತದೆ.
ಯುವವಾಹಿನಿ (ರಿ.) ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನೆ ಕಾರ್ಯಕ್ರಮದ 46 ನೇ ಭಜನಾ ಕಾರ್ಯಕ್ರಮವು ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರ ತಾಯಿ ಮನೆಯಲ್ಲಿ ದಿನಾಂಕ 12/03/2024 ಮಂಗಳವಾರದಂದು ಸಂಜೆ 7.00 ಗಂಟೆಗೆ ಸರಿಯಾಗಿ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಪ್ರಾರಂಭಗೊಂಡಿತು. ಸರಿ ಸುಮಾರು ಒಂದು ಗಂಟೆಗಳ ಕಾಲ ಮನೆಯವರು, ಸಂಬಂಧಿಕರು ಹಾಗೂ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು.
ರಾತ್ರಿ 8.30 ಕ್ಕೆ ಮಂಗಳಾರತಿಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಒಂದನೇ ಉಪಾಧ್ಯಕ್ಷರಾದ ಲತಿಶ್ ಪೂಜಾರಿ, ಎರಡನೇ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ವಸಂತ್, ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಶ್ರೀಮತಿ ನಯನ ರಮೇಶ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ಶ್ರೀಮತಿ ನೈನಾ ಕೋಟ್ಯಾನ್, ಜೊತೆ ಕಾರ್ಯದರ್ಶಿ ಶ್ರೀಮತಿ ಕೀರ್ತನ, ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಭಜನೆಯ ನಂತರ ಮನೆಯವರು ಭೋಜನದ ವ್ಯವಸ್ಥೆ ಯನ್ನು ಮಾಡಿದರು.