ಕಂಕನಾಡಿ : ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ಸಂವಿಧಾನ ದಿನದ ಪ್ರಯುಕ್ತ 2023ನೇ ಡಿಸೆಂಬರ್ 14 ರಂದು ಯುವವಾಹಿನಿ ಕಂಕನಾಡಿ ಘಟಕದ ಕಚೇರಿಯಲ್ಲಿ ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಯಿತು
ಜನಪ್ರಿಯ ನ್ಯಾಯವಾದಿ ಹಾಗೂ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಎನ್ಮಕಜ್ಜೆ ಇವರು ಸಂವಿಧಾನದ ಮೂಲಭೂತ ಕರ್ತವ್ಯಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
ಯುವವಾಹಿನಿ ಕಂಕನಾಡಿ ಘಟಕದ ಸುಮಾರು 50 ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.
ಇದು ನಿಜವಾಗಿ ಅತ್ಯುತ್ತಮ ಕಾರ್ಯಕ್ರಮ. ಯುವ ವಾಹಿನಿಯ ಪ್ರತಿಯೊಂದು ಘಟಕಗಳು ಕೂಡ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಕಂಕನಾಡಿ ಘಟಕಕ್ಕೆ ಅಭಿನಂದನೆಗಳು