ಮಂಗಳೂರು :- ಯುವವಾಹಿನಿ ಕೇಂದ್ರ ಸಮಿತಿಗೆ ಒಳಪಟ್ಟ ಎಲ್ಲಾ ಘಟಕಗಳ ಲೆಕ್ಕಪತ್ರ ಹಾಗೂ ಕಡತ ನಿರ್ವಹಣೆ, ಲೆಕ್ಕಪರಿಶೋಧನೆಯ ಕುರಿತು ಲೆಕ್ಕಪತ್ರ ಕಾರ್ಯಾಗಾರವು ದಿನಾಂಕ 30 ನವೆಂಬರ್ 2022ರ ಭಾನುವಾರದಂದು ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಇಲ್ಲಿ ಜರಗಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಕೇಂದ್ರ ಸಮಿತಿಯ ಗೌರವ ಸಲಹೆಗಾರರು ಹಾಗೂ ಹಿರಿಯ ನ್ಯಾಯವಾದಿ ಟಿ ಎನ್ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಸಕ್ತ ಸಾಲಿನ ಲೆಕ್ಕಪರಿಶೋಧಕರಾದ CA ಸುನಿಲ್ ಎ ರವರು ಘಟಕಗಳಲ್ಲಿ ಲೆಕ್ಕಪರಿಶೋಧನೆಗೆ ಪೂರಕವಾದ ಕಡತ ನಿರ್ವಹಣೆ, ಲೆಕ್ಕಪತ್ರ, ಬ್ಯಾಂಕ್ ಖಾತೆ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತಂತೆ ತರಭೇತಿಯನ್ನು ನೀಡಿದರು. ಇದಕ್ಕೆ ಪೂರಕವಾಗಿ ಪ್ರಸಕ್ತ ಸಾಲಿನ ಕೇಂದ್ರ ಸಮಿತಿಯ ಅಂತರಿಕ ಲೆಕ್ಕ ಪರಿಶೋಧಕರಾದ ಸುರೇಶ್ ಪೂಜಾರಿ ಪಣಂಬೂರು ಮಾಹಿತಿ ನೀಡಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ಎಲ್ಲರನ್ನು ಸ್ವಾಗತಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಘಟಕವನ್ನು ಬಲಿಷ್ಠ ವನ್ನಾಗಿಸುಲ್ಲಿ ದಾಖಲಾತಿ ಕೂಡ ಅತ್ಯಗತ್ಯವಾಗಿದ್ದು ಎಂದು ತಿಳಿಸಿ, ಶುಭ ಹಾರೈಸಿದರು.
ಕೇಂದ್ರ ಸಮಿತಿಯ ಕೋಶಾಧಿಕಾರಿ ಜಗದೀಶ್ಚಂದ್ರ ಡಿ ಕೆ ವಂದಿಸಿ, ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿದದರು.
ನಂತರ ಎಲ್ಲಾ ಘಟಕಗಳಿಗೆ ಕೇಂದ್ರ ಸಮಿತಿಯ ವತಿಯಿಂದ ಕ್ಯಾಶ್ ಬುಕ್ ಮತ್ತು ಜನರಲ್ ಲೆಡ್ಜರ್ ಪುಸ್ತಕ ನೀಡಲಾಯಿತು.