ಯುವವಾಹಿನಿ (ರಿ.) ಮಂಗಳೂರು ಹಾಗೂ ಮಹಿಳಾ ಘಟಕ

ಬೆನ್ನಿ ಬೇಸಾಯ – ಕೃಷಿಯಲ್ಲಿ ನಮ್ಮ ಭವಿಷ್ಯ ವ್ಯವಸಾಯದ ಸರಣಿ ಕಾರ್ಯಕ್ರಮದ ಐದನೇ ಹಂತ.

ಮಂಗಳೂರು:- ಯುವವಾಹಿನಿ (ರಿ.) ಮಂಗಳೂರು ಘಟಕ ಮತ್ತು ಮಂಗಳೂರು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಮೇಲು ಕೊಪ್ಪ ರಸ್ತೆಯಲ್ಲಿರುವ ಗದ್ದೆಯಲ್ಲಿ ದಿನಾಂಕ 25 ಸೆಪ್ಟೆಂಬರ್ 2022ರ ಭಾನುವಾರ ಗದ್ದೆಯ ಪುಣಿಯಲ್ಲಿರುವ ಹುಲ್ಲು ಕೆತ್ತುವ ಕಾರ್ಯಕ್ರಮವು ನಡೆಯಿತು. ಗದ್ದೆಗೆ ಹುಳು, ಹುಪ್ಪಟೆ, ಕ್ರೀಮಿ ಕೀಟಗಳು ಬರದಂತೆ ಗದ್ದೆಯ ಸುತ್ತ ಪುಣಿಯಲ್ಲಿರುವ ಹುಲ್ಲು ಕೆತ್ತುವ ಕೆಲಸವನ್ನು ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್, ಕಾರ್ಯದರ್ಶಿ ಅಶೋಕ್ ಅಂಚನ್, ಸಲಹೆಗಾರರಾದ ಯಶವಂತ ಪೂಜಾರಿ ಮತ್ತು ಶ್ರೀಯುತ ಶ್ರೀನಿವಾಸ್ ಕೂಳೂರು ರವರು, ಅಂಕಿತ್, ಶ್ರವಣ್ ಕೂಳೂರು, ತಿಲಕ್ ರಾಜ್ ಸುವರ್ಣ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಗೋಪಾಲಕೃಷ್ಣ, ಉಪಾಧ್ಯಕ್ಷರು ಹಾಗೂ ಸಲಹೆಗಾರರಾದ ಶ್ರೀಮತಿ ಸರಸ್ವತಿ ಶ್ರೀನಿವಾಸ, ಕಸ್ತೂರಿ, ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ರೇಖಾ ಗೋಪಾಲ್, ಮತ್ತಿತರ ಸದಸ್ಯರು ಭಾಗವಹಿಸಿದ್ದರು. ಬೆಳಗ್ಗಿನಿಂದ ಮಧ್ಯಾಹ್ನ ತನಕ ಹುಲ್ಲು ಕೆತ್ತುವ ಹಾಗೂ ನೀರು ಹಾಯಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಬೆಳಗಿನ ಉಪಹಾರ ನೀಡಿ ಸತ್ಕರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!