ಶಕ್ತಿನಗರ :- ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 29 ಸೆಪ್ಟೆಂರ್ 2022ರಂದು ಶ್ರೀ ಮಹಾಕಾಳಿ ಅನಂತ ಪದ್ಮನಾಭ ದೇವಸ್ಥಾನ ಮಹಾಕಾಳಿ ಇಲ್ಲಿ ಭಜನಾ ಸೇವೆಯು ನೆರವೇರಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಗುರುಸ್ತುತಿಯೊಂದಿಗೆ ದೀಪ ಬೆಳಗಿಸಿ ಭಜನೆಗೆ ಚಾಲನೆ ನೀಡಿದರು , ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಭವಾನಿ ಅಮೀನ್, ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ , ಕಾರ್ಯದರ್ಶಿ ಸುಜಾತಾ, ಸುಚರಿತ, ರೋಹಿಣಿ, ವಿಶ್ವನಾಥ್ ಕುಂದರ್, ನವೀನ್ ಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸತತವಾಗಿ ಒಂದು ಘಂಟೆಗಳ ಕಾಲ ಭಜನೆಯು ಸಾಂಗವಾಗಿ ನಡೆದು ಮಂಗಳಾರತಿ ಪ್ರಸಾದದೊಂದಿಗೆ ಕೊನೆಗೊಂಡಿತು. ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
SEP 29, 2022 2.14 PM IST


