ಬಜ್ಪೆ:- ಯುವವಾಹಿನಿ (ರಿ.) ಬಜ್ಪೆ ಘಟಕದ ವತಿಯಿಂದ ಬಜಪೆ ತಾರಿಕಂಬಳ ನಿವಾಸಿಯಾದ ಸುರೇಂದ್ರ ಪೂಜಾರಿ ಮತ್ತು ಗಾಯತ್ರಿ ದಂಪತಿಗಳ ಮಗಳಾದ ಬೇಬಿ ದೀಕ್ಷಾ ಇವರು ಮೆದುಳಿನ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದು, ತೀರಾ ಕಡು ಬಡತನದಲ್ಲಿರುವ ಈ ಕುಟುಂಬಕ್ಕೆ ಘಟಕದ ವತಿಯಿಂದ ಸಹಾಯಧನ ನೀಡಲಾಯಿತು ಹಾಗೂ ಬಜಪೆ ಕಿನ್ನಿಪದವು ನಿವಾಸಿಯಾದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಈ ಕುಟುಂಬಕ್ಕೆ ಘಟಕದ ವತಿಯಿಂದ ಧನಸಹಾಯ ನೀಡಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಉಷಾ ಸುವರ್ಣ, ಮಾಜಿ ಅಧ್ಯಕ್ಷರುಗಳಾದ ರವೀಂದ್ರ ಪೂಜಾರಿ, ಚಂದ್ರಶೇಖರ ಪೂಜಾರಿ, ದೇವರಾಜ್ ಅಮೀನ್, ಸಂಧ್ಯಾ ಕುಲಾಯಿ,ಯೋಗೀಶ್ ಪೂಜಾರಿ, ಜತೆಕಾರ್ಯದರ್ಶಿ ರೇಷ್ಮಾ, ಪ್ರಜ್ವನಿ ಮಿತೇಶ್, ತೇಜಸ್ ಹಾಗೂ ಲೀಲಾ ತಾರಿಕಂಬಳ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Good job