ಬಂಟ್ವಾಳ : ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಗಣೇಶ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ. ದಿನಾಂಕ 10.07.2022 ರಂದು ಬೆಂಜನಪದವು ಶುಭಲಕ್ಷೀ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 21 ಸದಸ್ಯರ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯದರ್ಶಿಯಾಗಿ ನಾಗೇಶ್ ಪೂಜಾರಿ ನೈಬೇಲು, ಉಪಾಧ್ಯಕ್ಷರಾಗಿ ಹರೀಶ್ ಕೋಟ್ಯಾನ್ ಕುದನೆ, ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿಯಾಗಿ ಧನುಷ್ ಮದ್ವ, ಜತೆ ಕಾರ್ಯದರ್ಶಿಯಾಗಿ ಲೋಹಿತ್ ಕನಪಾದೆ, ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ ನಿರ್ದೇಶಕರಾಗಿ ನಾಗೇಶ್ ಪೂಜಾರಿ ಏಲಾಬೆ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಮಧುಸೂದನ್ ಮದ್ವ, ಸಮಾಜ ಸೇವಾ ನಿರ್ದೇಶಕರಾಗಿ ನಾರಾಯಣ ಪೂಜಾರಿ ಪಲ್ಲಿಕಂಡ, ಸಾಹಿತ್ಯ ನಿರ್ದೇಶಕರಾಗಿ ಸುಲತಾ ಕೀರ್ತನ್, ಸಾಂಸ್ಕೃತಿಕ ನಿರ್ದೇಶಕರಾಗಿ ಪ್ರಜಿತ್ ಕುಮಾರ್, ಕ್ರೀಡಾ ನಿರ್ದೇಶಕರಾಗಿ ಉದಯ ಪೂಜಾರಿ ಮೇನಾಡು, ಆರೋಗ್ಯ ನಿರ್ದೇಶಕರಾಗಿ ಹರಿಣಾಕ್ಷಿ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಕಿರಣ್ರಾಜ್ ಪೂಂಜರೆಕೋಡಿ, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ಸಂದೀಪ್, ಹಾಗೂ ಸೃಜನಿ, ಮಹಿಳಾ ಸಂಘಟನಾ ನಿರ್ದೇಶಕರಾಗಿ ನಿವೇದಿತಾ ಹಾಗೂ ಪ್ರತಿಮಾ ಅಂಚನ್, ಪ್ರಚಾರ ನಿರ್ದೇಶಕರಾಗಿ ಪ್ರಸಾದ್ ಬಾಯಿಲ, ವಿದ್ಯಾನಿಧಿ ನಿರ್ದೇಶಕರಾಗಿ ಸುನೀಲ್ ಸುವರ್ಣ ರಾಯಿ, ಸಂಘಟನಾ ಕಾರ್ಯದರ್ಶಿಯಾಗಿ ನಿಕೇಶ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.