ಬಂಟ್ವಾಳ : ಮಂಗಳೂರು-ಬೆಂಗಳೂರು, ಮಂಗಳೂರು-ಧರ್ಮಸ್ಥಳ ಮುಂತಾದ ಪ್ರಮುಖ ರಸ್ತೆಗಳು ಒಟ್ಟು ಸೇರುವ ಬಿ.ಸಿ.ರೋಡ್ ನ ಪ್ರಮುಖ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಯುವವಾಹಿನಿ(ರಿ). ಬಂಟ್ವಾಳ ತಾಲೂಕು ಘಟಕವು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ರಾದ ಬಿ.ರಮಾನಾಥ ರೈ ಯವರಿಗೆ ದಿನಾಂಕ 28-06-2015 ರಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ರಾಜೇಶ್ ಸುವರ್ಣ , ಪುರಸಭಾ ಸದಸ್ಯರಾದ ವಾಸು ಪೂಜಾರಿ ಮತ್ತು ಲೋಕೇಶ್ ಸುವರ್ಣ, ಯುವವಾಹಿನಿ ಮಾಜಿ ಅಧ್ಯಕ್ಷರಾದ ತಾರನಾಥ ಕೆ. , ಭುವನೇಶ್ ಪಚ್ಚಿನಡ್ಕ , ಶ್ರೀಧರ ಅಮೀನ್ , ಹರೀಶ್ ಎಸ್.ಕೋಟ್ಯಾನ್ , ಯೋಗೀಶ್ ಪೂಜಾರಿ, ನಾಗೇಶ್ ಪೊನ್ನೋಡಿ, ಲೋಕೇಶ್ ಪೂಜಾರಿ ಪಿ., ಗಣೇಶ್ ಪೂಂಜೆರಕೋಡಿ , ಹರೀಶ್ ಕೋಟ್ಯಾನ್ ಕುದನೆ , ಹರೀಶ್ ಸಾಲ್ಯಾನ್ ಅಜೆಕಲ , ಕಿರರ್ಣ ರಾಜ್, ಪ್ರವೀಣ್ ಸುವರ್ಣ,ಸುನೀಲ್ ಮರ್ದೊಳಿ , ಸುನೀಲ್ ಕುಮಾರ್ ಕಾಯರ್ ಮಾರ್ , ನಾಗೇಶ್ ಏಲಬೆ, ಸತೀಶ್ , ಜಗ ದೀಶ್ ಸುವರ್ಣ ಕಕ್ಯಗುತ್ತು ,ಅರುಣ್ ಕುಮಾರ್, ಜಗದೀಶ್ , ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.