ಯುವವಾಹಿನಿ (ರಿ) ಕಟಪಾಡಿ ಘಟಕದ ಪದಗ್ರಹಣ ಸಮಾರಂಭವು ಆಗಸ್ಟ್ 28 ರಂದು ಶ್ರೀ ವಿಶ್ವನಾಥ ಕ್ಷೇತ್ರದ ಗುರುಪ್ರಸಾದ್ ಸಭಾಂಗಣದಲ್ಲಿ ಜರಗಿತು.ಉದ್ಯಮಿ ಕಾಪು ಪ್ರಭಾಕರ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪದ ಪ್ರಧಾನ ವನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ನರೇಶ್ ಸಶಿಹಿತ್ಳು ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ನಮ್ಮ ಘಟಕದ ಸಲಹೆಗರರಾದ ರವಿರಾಜ್ ಮತ್ತು ಉಡುಪಿ ವಲಯ ಸಂಘಟಕರಾದ ರಮೇಶ್ ಕೋಟಿಯಾನ್ ಹಾಗೂ ಕ್ಷೇತ್ರದ ಅಧ್ಯಕ್ಷರಾದ ಬಿ ಎನ್ ಶಂಕರ್ ಪೂಜಾರಿ ಉಪಸ್ಥಿತರಿದ್ದರು. 2018-19 ರ ಅಧ್ಯಕ್ಷರಾದ ರಿತೇಶ್ ಕೋಟಿಯಾನ್. ಘಟಕದ ಜೊತೆ ಕಾರ್ಯದರ್ಶಿ ಮಧುಕರ್ ಅಂಚನ್ ಧನ್ಯವಾದ ನೀಡಿದರು. ಪೂರ್ವಾಧ್ಯಕ್ಷರದ ಎನ್ ಜಿ ಸುಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
AUG 28, 2019 5.14 PM IST



