ಇತ್ತೀಚೆಗೆ ನಿಧನರಾದ ಸಾಹಿತಿ, ನಿವೃತ್ತ ಕಂದಾಯ ಇಲಾಖಾಧಿಕಾರಿ,ಯುವವಾಹಿನಿಯ ಸ್ಥಾಪಕಾಧ್ಯಕ್ಷ ಬಿ.ತಮ್ಮಯ ಅವರಿಗೆ ನುಡಿನಮನ, ಸಾರ್ವಜನಿಕ ಸಂತಾಪ ಸೂಚಕ ಸಭೆ ಬಂಟ್ವಾಳದ ಬಂಟರ ಭವನದಲ್ಲಿ ದಿನಾಂಕ 23-09-2019 ನೇ ಸೋಮವಾರ ನಡೆಯಿತು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೋ.ತುಕಾರಾಮ್ ಪೂಜಾರಿ. ತಮ್ಮಯರ ಸಹೋದರ ರಾಮ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು, ಲೇಕಕಿ ಬಿ.ಎಂ.ರೋಹಿಣಿ, ಪಿಂಚಣಿದಾರರ ಸಂಘದ ಪರವಾಗಿ ಮಧುಕರ ಮಲ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಮಾಂಬಾಡಿ, ಕಸಾಪ ಮಾಜಿ ತಾಲೂಕು ಅಧ್ಯಕ್ಷರಾದ ಜಯನಂದ ಪೆರಾಜೆ, ಕೈಕುಂಜೆ ಅಭಿವೃದ್ಧಿ ಸಂಘದ ಪ್ರೊ.ಆನಂದ ಪದ್ಮನಾಭ ರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮಾನಾಥ ರೈ ಮೆರವು, ತಮಯರ ಒಡನಾಡಿಗಳಾಗಿದ್ದ ಎ.ಪಿ.ಭಟ್, ಮುದ್ದು ಮುಡುಬೇಳ್ಳೆ , ಪ್ರಸನ್ನ ಪಕ್ಕಳ, ಮತ್ತಿತರರು ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಕೆ.ಹರಿಕೃಷ್ಣ ಬಂಟ್ವಾಳ್ , ಬೇಬಿ ಕುಂದರ್ , ತಾಪಂ.ಉಪಾಧ್ಯಕ್ಷ ಬಿ.ಎಂ ಅಬ್ಬಾಸ್ ಆಲಿ.ಕಲಾವಿದ ಮಂಜು ವಿಟ್ಲ,ಮಾಯಿಲಪ್ಪ ಸಾಲ್ಯನ್ , ಜಯಂತಿ ಪೂಜಾರಿ, ಜಗದೀಶ್ ಕೊಯ್ಲ, ಯುವವಾಹಿನಿತ ಪ್ರಮುಕರಾದ ಇಂದಿರೇಶ್ ಮಿತ್ತಬೈಲು, ಮಾಜಿ ಅಧ್ಯಕ್ಷರಾದ ಟಿ.ಶಂಕರ್ ಸುವರ್ಣ, ಜೀತೆಂದ್ರ ಸುವರ್ಣ, ಶ್ರೀಧರ ಅಮೀನ್, ರಾಜೇಶ್ ಸುವರ್ಣ, ಲೊಕೇಶ್ ಸುವರ್ಣ ಅಲೆತ್ತೂರು, ಎಂ ಶಿವನಂದ ಸಹಿತ ಪ್ರಮುಖರು ನುಡಿನಮನ ಸಲ್ಲಿಸಿದರು. ರಾಮಚಂದ್ರ ಸುವರ್ಣ, ನಾಗೇಶ್ ಪೂನ್ನೋಡಿ, ಪ್ರೇಮಾನಥ್ ಬಂಟ್ವಾಳ, ಉಪಾಧ್ಯಕ್ಷರಾದ ಸತೀಶ್ ಬಾಯಿಲ, ಸುಂದರ ಪೂಜಾರಿ ಬೋಳಂಗಡಿ, ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ, ಕೋಶಾಧಿಕಾರಿ ಗಣೇಶ್ ಪೂಂಜರಕೋಡಿ, ಹಾಗೂ ಘಟಕದ ಸದಸ್ಯರು ಹಾಜರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.