ಯುವವಾಹಿನಿ(ರಿ)ಎಕ್ಕಾರು-ಪೆರ್ಮುದೆ ಹಾಗು ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು-ಪೆರ್ಮುದೆ ಇದರ ಜಂಟಿ ಆಶ್ರಯದಲ್ಲಿ ರಾಧೆ-ಕೃಷ್ಣ ಸ್ಪರ್ಧೆ ೨೦೧೯ ದಿನಾಂಕ ೨೫/೦೮/೨೦೧೯ ರಂದು ಬಿಲ್ಲವ ಸಮಾಜ ಸೇವಾ ಸಂಘ ದ ಸಭಾ ಭವನ ದಲ್ಲಿ ಜರುಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂದೇಶ್ ಪೂಜಾರಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷರಾದ ಯಾದವ ಕೋಟ್ಯಾನ್, ಪ್ರದೀಪ್ ಕುಮಾರ್ ಸುವರ್ಣ, ರಮಾನಂದ ಸಾಲ್ಯಾನ್, ಉಪಾಧ್ಯಕ್ಷರಾದ ಚಂದ್ರಹಾಸ ಪೂಜಾರಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ – ಅಕ್ಷರ ಎಕ್ಕಾರು, ದ್ವಿತೀಯ ಬಹುಮಾನ – ಧ್ರುವಿ ಹಾಗೂ ತೃತೀಯ ಬಹುಮಾನ – ಗಹನ್ ಪೆರ್ಮುದೆ ಇವರು ಪಡೆದರು. ಕೃಷ್ಣ ವೇಷಧಾರಿಯಾಗಿ ಕಾರ್ಯಕ್ರಮ ದ ಕೇಂದ್ರ ಬಿಂದುವಾಗಿ ಮಗು ಸಿಮೋನ ಡಿಸೋಜ ಇವರು ಎಲ್ಲರ ಅಚ್ಚುಮೆಚ್ಚುಗೆ ಪಡೆದರು. ಘಟಕದ ಪದಾಧಿಕಾರಿಗಳು ಹಾಗು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.