
ಯಡ್ತಾಡಿ : ಯುವವಾಹಿನಿ ಯಡ್ತಾಡಿ ಘಟಕದಿಂದ ನಮ್ಮ ನಡೆ ಕಾರ್ಯಕ್ರಮ ದಿನಾಂಕ 25/05/2019 ರ ಶನಿವಾರ ಕಂಬಳಕಟ್ಟು ಸತೀಶ ಪೂಜಾರಿಯವರ ಮನೆಯಲ್ಲಿ ಜರಗಿತು…ಈ ಕಾರ್ಯಕ್ರಮ ಈ ಹಿಂದೆ ನಡೆದ ನಮ್ಮ ನಡೆ ಕಾರ್ಯಕ್ರಮಗಳಿಗಿಂತ ವಿಭಿನ್ನ ವಾಗಿ ಮೂಡಿ ಬಂದಿತ್ತು ….ನಮ್ಮ ಯುವವಾಹಿನಿ ಸದಸ್ಯರ ಪುಟಾಣಿ ಮಕ್ಕಳೇ ನಿರೂಪಣೆ ಮಾಡಿ ಆಯೋಜಿಸಿದ್ದು ಮಕ್ಕಳೇ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದು ವಿಶೇಷವಾಗಿತ್ತು..ಯುವವಾಹಿನಿ ಸದಸ್ಯರೆಲ್ಲರೂ ಆಟೋಟ ಕಾರ್ಯಕ್ರಮ ಹಾಗು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಮಕ್ಕಳೊಂದಿಗೆ ಬೆರೆತು ಹಿರಿಯರು ಕಿರಿಯರು ಎಲ್ಲರೂ ಖುಷಿಯಿಂದ ನಲಿದಾಡಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು…. .ಈ ಕಾರ್ಯಕ್ರಮವನ್ನು ಹಿರಿಯರಾದ ಗುಲಾಬಿ ಪೂಜಾರಿಯವರು ಉದ್ಘಾಟಿಸಿ ..ನೂತನ ಅಧ್ಯಕ್ಷರಾದ ಗೀತಾ ಪೂಜಾರಿಯವರ ಅದ್ಯಕ್ಷತೆಯಲ್ಲಿ . ಸತೀಶ್ ಪೂಜಾರಿ ವಡ್ಡರ್ಸೆ , ಪ್ರಕಾಶ್ ಪೂಜಾರಿ ಸುಮುಖ ಹಾಗು ಯುವವಾಹಿನಿ 73 ಸದಸ್ಯರು ಪಾಲ್ಗೊಂಡಿದ್ದರು..
ಕೊನೆಯದಾಗಿ ಸತೀಶ್ ಪೂಜಾರಿಯವರು ಮತ್ತು ಮನೆಯವರು ಉತ್ತಮ ಊಟೋಪಚಾರದ ವ್ಯವಸ್ಥೆ ಮಾಡಿದ್ದರು …ಎಲ್ಲರೂ ಅದನ್ನು ಪ್ರೀತಿಯಿಂದ ಸವಿದರು ….ಹಾಗು ಒಂದು ವರ್ಷಗಳ ಕಾಲ ಯಡ್ತಾಡಿ ಯುವವಾಹಿನಿ ಘಟಕವನ್ನು ಸತೀಶ್ ಪೂಜಾರಿಯವರ ಪರಿಕಲ್ಪನೆಯಂತೆ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ರೂಪಿಸಿದ ನಮ್ಮ ನಡೆ…ಹಾಗು ಅಧ್ಯಕ್ಷ ,ಕಾರ್ಯದರ್ಶಿಗಳ ಇನ್ನಿತರ ಯಶಶ್ವಿ ಕಾರ್ಯಕ್ರಮಗಳ ಮೂಲಕ ಯಡ್ತಾಡಿ ಯುವವಾಹಿನಿಯಲ್ಲಿ ಸಂಚಲನ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸತೀಶ್ ಪೂಜಾರಿಯವರು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುತ್ತಿರುವುದನ್ನು ನೆನೆದು ಸತೀಶ್ ಪೂಜಾರಿಯವರ ದಂಪತಿಗಳಿಗೆ ಎಲ್ಲರ ಶುಭ ಹಾರೈಕೆಯೊಂದಿಗೆ ಎಲ್ಲರ ಮನಸಲ್ಲೂ ಏನೋ ಕಳೆದುಕೊಂಡ ಅನುಭವ ಆಗಿದ್ದು ಸುಳ್ಳಲ್ಲ …


