ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದಿಂದ ದಿನಾಂಕ 16.06.2019 ರ ಭಾನುವಾರ ಶ್ರೃಂಗೇರಿ, ಹೊರನಾಡು, ಕಲಶ ಮತ್ತು ಕುದುರೆಮುಖ ಬೆಟ್ಟಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಸುಮಾರು 100 ಜನರನ್ನು ಒಳಗೊಂಡ ಪ್ರವಾಸಿ ತಂಡವು ಎರಡು ಬಸ್ಸುಗಳಲ್ಲಿ ಬೆಳಿಗ್ಗೆ 6.00 ಗಂಟೆಗೆ ಸರಿಯಾಗಿ ಯುವವಾಹಿನಿ ಸಭಾಂಗಣದಿಂದ ಹೊರಟ್ಟಿತ್ತು. ಬಜಗೋಳಿಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿದ ನಂತರ ಕಳಸ, ಹೊರನಾಡು, ಶೃಂಗೇರಿ ಮತ್ತು ಕುದುರೆ ಮುಖ ಬೆಟ್ಟಗಳ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ರಾತ್ರಿ 8.00 ಗಂಟೆಗೆ ವಾಪಸು ಬಂದಿದ್ದೇವೆ. ದಿನವಿಡೀ ಹಾಡು, ಒಗಟು, ಅಂತಾಕ್ಷರಿ, ಆಟೋಟ, ಕುಣಿತಗಳಿಂದ ಕೂಡಿದ್ದ ಪ್ರವಾಸವೂ ಉಲ್ಲಾಸದಾಯಕವಾಗಿತ್ತು. ಪ್ರವಾಸದಿಂದ ಪ್ರಭಾವಿತರಾದ ಸದಾಶಿವ ದಂಪತಿಗಳು ಘಟಕದ ಶೈಕ್ಷಣಿಕ ದತ್ತು ಸ್ವೀಕಾರ ನಿಧಿಗೆ ರೂ. 5000.00 ವನ್ನು ನೀಡಿದ್ದು ಮರೆಯಲಾಗದ್ದು. ಅತ್ಯಂತ ಯಶಸ್ವಿಯಾಗಿ ಪ್ರವಾಸವನ್ನು ಸಂಘಟಿಸಿರುವ ಸಂಚಾಲಕರಾದ ಗೋಪಾಲ ಪೂಜಾರಿ ಮತ್ತು ಸಹ ಸಂಚಾಲಕದ ಸತೀಶ್ ಕುಮಾರ್ ರವರಿಗೆ ಎಲ್ಲರೂ ಧನ್ಯವಾದಗಳನ್ನು ಸಲ್ಲಿಸಿದರು.