
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ಸ್ವಚ್ಛತಾ ಅಭಿಯಾನದ 10ನೇ ಕಾರ್ಯಕ್ರಮವು ದಿನಾಂಕ 12.05.2019 ರಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪಂಜಿಮೊಗರಿನಿಂದ ಉರುಂದಾಡಿ ಸಂಪರ್ಕಿಸುವ ರಸ್ತೆಯಿಂದ ಪ್ರಾರಂಭಗೊಂಡು ಗೋಪಾಲಕೃಷ್ಣ ಭಜನಾ ಮಂದಿರದ ವರೆಗೆ ನಡೆಯಿತು. ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಅಭಿಯಾನದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಯು. ಅಮೀನ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ನಿಶಿತ್ ಹಾಗೂ ಘಟಕದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು.


