ಮಾಣಿ : ಜೀವನ ಪಯಣದ ಹಾದಿಯಲ್ಲಿ ಸಂಬಂಧಗಳು ಬಲು ಮಹತ್ವ ಪಡೆದಿದೆ. ಸಂಬಂಧಗಳು ಉಳಿಯಬೇಕಾದರೆ ಸ್ಪಂದನೆಯ ಅಗತ್ಯವಿದೆ. ಅದಕ್ಕೆ ಸಕಾಲ ಎಂಬಂತೆ ದುರ್ದೈವವಸಾತ್ ನಮ್ಮಘಟಕದ ಸದಸ್ಯರಾದ ನಮ್ಮ ಹತ್ತಿರದ ನಿವಾಸಿ ಬರಿಮಾರ್ ಗ್ರಾಮದ, ಬಲ್ಯ ಬಳಿ ವಾಸವಾಗಿರುವ ಸದಾನಂದ ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರ, “ಅಶ್ವಥ್” ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಏ.ಜೆ ಹಾಸ್ಪಿಟಲ್ ನ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದರು ಹಾಗೂ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದೆ . ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ಹಣದ ನೆರವಿನ ಅವಶ್ಯಕತೆ ಇದ್ದು ಸ್ಪಂದಿಸುವ ಅಗತ್ಯವಿತ್ತು.
ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ನಮ್ಮ ಯುವವಾಹಿನಿ(ರಿ.) ಮಾಣಿ ಘಟಕದ ಸ್ಪಂದನ ಯೋಜನೆಯಡಿಯಲ್ಲಿ ನಮ್ಮಿಂದಿಷ್ಟು ಸಹಾಯ ಮಾಡವ ಉದ್ದೇಶ ಹೊಂದಿದ್ದು ಹಾಗೂ ಈ ಸೇವೆಯಲ್ಲಿ ಸದಸ್ಯರ ಪಾಲು ಇರಲಿ ಎಂಬ ಬೇಡಿಕೆಯೊಂದಿಗೆ ಸಹೃದಯಿ ಸದಸ್ಯರು ತಮ್ಮಿಂದಾದ ಸಹಾಯ ಪಡೆದು ಮತ್ತು ಉಳಿದ ಹಣವನ್ನು ಸ್ಪಂದನ ಯೋಜನೆಯ ಮೂಲಕ ರೂ ಹೊಂದಿಸಿಕೊಂಡು ರೂ.10,000/- ಇಂದು ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಧನ ಸಹಾಯ ನೀಡಲಾಯಿತು. ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ,ಕಾರ್ಯದರ್ಶಿ ಸುಜಿತ್ ಅಂಚನ್ ಮತ್ತು ಶಿವರಾಜ್ P.R ಕೋಶದಿಕಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು