ದಿನಾಂಕ 21-01-2017 ರಂದು ಮಂಗಳೂರು ಮಹಿಳಾ ಘಟಕದ ವತಿಯಿಂದ ಕೆಪಿಟಿ ಬಳಿಯ ಸರಕಾರಿ ಮಹಿಳಾ ತರಬೇತಿ ಕೇಂದ್ರದಲ್ಲಿ ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಇವರಿಂದ ಅಣುಕು ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಡಿಸ್ಟ್ರಿಕ್ಟ್ ಫೈಯರ್ ಆಫೀಸರ್ ಪರಮೇಶ್ವರ್, ಡೆಪ್ಯುಟಿ ಕಮಾಡೆಂಟ್ ಆಫ್ ಹೋಂಗಾರ್ಡ್ ಹಾಗೂ ಐ.ಟಿ.ಐ.ನ ಪ್ರೊಫೆಸರ್ ಎ. ಬಾಲಕೃಷ್ಣ ಇವರುಗಳು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಉಪಾಧ್ಯಕ್ಷ ಯಶವಂತ ಪೂಜಾರಿ, ಘಟಕದ ಸಲಹೆಗಾರ ಅಶೋಕ್ಕುಮಾರ್, ಮಂಗಳೂರು ಘಟಕದ ಮಾಜಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಹಾಗೂ ಕಂಕನಾಡಿ ಘಟಕದ ಅಧ್ಯಕ್ಷ ಹರೀಶ್ ಕೆ. ಸನಿಲ್ ಮೊದಲಾದವರು ಉಪಸ್ಥಿತರಿದ್ದರು.