ಕುಪ್ಪೆಪದವು : ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿಂದ ದಿನಾಂಕ 10.02.2019 ರಂದು ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಮುಕ್ಕ ಶ್ರೀನಿವಾಸ ದಂತ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
ಯುವವಾಹಿನಿ (ರಿ)ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುಪ್ಪೆಪದವು ಘಟಕದ ಕೃಷಿ ಚಟುವಟಿಕೆಯ ಬಗ್ಗೆ ಶ್ಲಾಘಿಸಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯುವವಾಹಿನಿ(ರಿ) ಕುಪ್ಪೆಪದವು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ಅಂಬೆಲೊಟ್ಟು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಯುವವಾಹಿನಿಯ ಸಮಾಜಮುಖಿ ಚಟುವಟಿಕೆಯ ಶ್ಲಾಘನೀಯ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಪ್ಪೆಪದವು ಬಿಲ್ಲವ ಸೇವಾಸಮಿತಿ ಅಧ್ಯಕ್ಷರಾದ ಹಿರಣ್ಯಾಕ್ಷ ಕೋಟ್ಯಾನ್ ತಿಳಿಸಿದರು.
ಡಾ.ಕೆವಿನ್ ಪಾಯಸ್ ದಂತ ಚಿಕಿತ್ಸೆಯ ಹಾಗೂ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್, ಯುವವಾಹಿನಿ ಕುಪ್ಪೆಪದವು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ಅಂಬೆಲೋಟ್ಟು , ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಬಲ್ಲಾಜೆ,ಜಗದೀಶ್ ದುರ್ಗಕೊಡಿ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಅಜಯ್ ಅಮೀನ್ ನಾಗಂಡದಿ ಇವರು ಸ್ವಾಗತಿಸಿ,ವಂದಿಸಿದರು, ಜೊತೆಕಾರ್ಯದರ್ಶಿ ಗೀತಾರವರು ಕಾರ್ಯಕ್ರಮ ನಿರೂಪಿಸಿದರು.