ಕೂಳೂರು ಘಟಕದ ವತಿಯಿಂದ ದಿನಾಂಕ 14-12-2016 ರಂದು ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಪ್ರಸ್ತುತ ದಿನದಲ್ಲಿ ಯವಜನತೆ’ ಎಂಬ ಕಾರ್ಯಾಗಾರ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನರೇಶ್ಕುಮಾರ್ ಸಸಿಹಿತ್ಲುರವರು ಪ್ರಸ್ತುತ ಸಮಾಜದಲ್ಲಿ ಬಿಲ್ಲವ ಯುವಜನತೆಗೆ ಆಗುವಂತಹ ತೊಂದರೆಗಳ ಬಗ್ಗೆ ತಿಳಿಸಿದರು. ಬಿಲ್ಲವ ಯುವಜನತೆಯು ಯಾವ ರೀತಿಯಲ್ಲಿ ಅನ್ಯ ಸಮುದಾಯದಿಂದ ದಾರಿ ತಪ್ಪುತ್ತಿದೆ ಎಂಬ ವಿಷಯವನ್ನು ಕೆಲವೊಂದು ಉದಾಹರಣೆಯ ಮೂಲಕ ತಿಳಿಸಿ ಯುವಜನತೆಗೆ ಎಚ್ಚರಿಕೆಯನ್ನು ನೀಡಿದರು ಹಾಗೂ ಆದಷ್ಟು ಯುವಜನತೆಯು ಯುವವಾಹಿನಿಗೆ ಸೇರಿ ಈ ಎಲ್ಲಾ ತೊಂದರೆಗಳಿಂದ ಮುಕ್ತರಾಗಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿ, ಮಂಗಳೂರು ಘಟಕದ ಅಧ್ಯಕ್ಷ ಸುನಿಲ್ ಕೆ. ಅಂಚನ್, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ಗಿರಿಧರ್ ಸನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಘಟಕಾಧ್ಯಕ್ಷ ಸುಜಿತ್ರಾಜ್ ಐ.ಯವರು ಅಧ್ಯಕ್ಷತೆ ವಹಿಸಿದ್ದರು.