ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಸಾಧನೆ ಶ್ಲಾಘನೀಯ ವಾದುದು. ಕಳೆದ 30 ವರ್ಷಗಳಿಂದ ಬಂಟ್ವಾಳ ತಾಲೂಕಿನಲ್ಲಿ ನಿರಂತರ ಸಮಾಜಮುಖಿ ಕಾರ್ಯಗಳ ಮೂಲಕ ಮನೆಮಾತಾಗಿವೆ. ಬಡವರಿಗೆ ಸೂರು, ವಿದ್ಯಾರ್ಥಿ ವೇತನ, ಅನ್ವೇಷಣಾ ಶಿಬಿರ ಹೀಗೆ ಹತ್ತು ಹಲವು ಯೋಜನೆಗಳು ಘಟಕದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ರಜತ ಸಂಭ್ರಮ, ಯುವ ಬಿಲ್ಲವ ಸಮಾವೇಶವು ಯುವವಾಹಿನಿಯ ಇತಿಹಾಸದ ದಾಖಲೆಯ ಪುಟ ಸೇರಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ತಿಳಿಸಿದರು.
ಅವರು ದಿನಾಂಕ 04.11.2018 ರಂದು ಬಿ.ಸಿ.ರೋಡ್ ಯುವವಾಹಿನಿ ಭವನದಲ್ಲಿ ನಡೆದ ವಿಶುಕುಮಾರ್ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ವತಿಯಿಂದ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಶಿವಾನಂದ ಎಮ್, ಕಾರ್ಯದರ್ಶಿ ಕಿರಣ್ ರಾಜ್ ಪೂಂಜರೆಕೋಡಿ, ಉಪಾಧ್ಯಕ್ಷ ರಾದ ನಾಗೇಶ್ ಎಮ್, ಸತೀಶ್ ಪೂಜಾರಿ ಬಾಯಿಲ, ಕೋಶಾಧಿಕಾರಿ ಗಣೇಶ್ ಮಣಿ, ಜತೆ ಕಾರ್ಯದರ್ಶಿ ರಚನಾ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.