ಬೆಂಗಳೂರು : ಯುವವಾಹಿನಿ (ರಿ) ಬೆಂಗಳೂರು ಘಟಕದಿಂದ ದಿನಾಂಕ 07-10-1018 ರಂದು ಒಂದು ದಿನದ ಪ್ರವಾಸ ಅನ್ವಯ ಕೋಟಿಲಿಂಗೇಶ್ವರ ಮತ್ತು ಅಂತರಗಂಗೆಗೆ ಹಮ್ಮಿಕೊಳ್ಳಲಾಗಿತ್ತು, ಒಟ್ಟು 43 ಬೆಂಗಳೂರಿನ ಯುವವಾಹಿನಿ ಬಂಧುಗಳು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.
ಪ್ರವಾಸ ಬೆಳಿಗ್ಗೆ 7.15 ಗೆ ಹೊರಟು ಹೊಸಕೋಟೆಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿ 12 ಗಂಟೆಗೆ ಮದ್ಯಾಹ್ನ ಕೋಟಿಲಿಂಗೇಶ್ವರ ಗೆ ತಲುಪಿ 2 ಗಂಟೆ ಹೊತ್ತಿಗೆ ಊಟ ಮುಗಿಸಿ ಅಂತರಗಂಗೆ ಗೆ ಪಯಣ ನಡೆಸಿ 3.30 ಗಂಟೆಗೆ ತಲುಪಿದ್ದೇವೆ, ಅಲ್ಲಿಯ ದರ್ಶನ ಮುಗಿಸಿ ಸಾಯಂಕಾಲ 5 ಗಂಟೆಗೆ ಬೆಂಗಳೂರಿನತ್ತ ಪಯಣ ನಡೆಸಿ, ಸಂಜೆಯ ಉಪಹಾರದ ಒಟ್ಟಿಗೆ ಸುಮಾರು 7.30 ಗೆ ಬೆಂಗಳೂರಿಗೆ ಬಂದು ತಲುಪಿದ್ದೇವೆ. ಪ್ರವಾಸಕ್ಕೆ ಬಂದ ಎಲ್ಲರಿಗೂ ತಮ್ಮ ತಮ್ಮ ಪ್ರವಾಸದ ಅನಿಸಿಕೆ ಯನ್ನು ವ್ಯಕ್ತಪಡಿಸಿದರು, ಪ್ರವಾಸ ಆಯೋಜಿಸಿದ ಯುವವಾಹಿನಿಯ ಬಗ್ಗೆ ಒಳ್ಳೆಯ ಪ್ರಶಂಸೆ ವ್ಯಕ್ತಪಡಿಸಿದರು.