ಬೆಂಗಳೂರು : ಯುವವಾಹಿನಿ(ರಿ) ಕೇಂದ್ರ ಸಮಿತಿಯ ತಂಡವು ಬೆಂಗಳೂರಿಗೆ ತೆರಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಡಾ.ಜಯಮಾಲರನ್ನು ವಿದಾನಸೌಧದಲ್ಲಿ ಭೇಟಿಯಾಗಿ ಯುವವಾಹಿನಿಯ ೩೧ನೆೇ ವಾರ್ಷಿಕ ಸಮಾವೇಶದ ಆಮಂತ್ರಣ ಪತ್ರ ನೀಡಿ ಸಮಾವೇಶಕ್ಕೆ ಆಹ್ವಾನ ನೀಡಲಾಯಿತು.
ಆಗಸ್ಟ್ 05 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆಷನ್ ಸೆಂಟರ್ ನಲ್ಲಿ ನಡೆಯುತ್ತಿರುವ ಯುವವಾಹಿನಿಯ 31ನೇ ವಾರ್ಷಿಕ ಸಮಾವೇಶದಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದು, ಎಲ್ಲರೂ ಸಮಾವೇಶ ಯಶಸ್ವಿಗೊಳಿಸೋಣ ಎಂದು ಅವರು ತಿಳಿಸಿದರು
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಉಪಾಧ್ಯಕ್ಷ ಜಯಂತ ನಡುಬೈಲು, ನರೇಶ್ ಕುಮಾರ್ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಸಮಾವೇಶ ನಿರ್ದೇಶಕ ಹರೀಶ್ ಕೆ.ಪೂಜಾರಿ ಹಾಗೂ ಸುಧೀರ್ ಪೂಜಾರಿ ಉಪಸ್ಥಿತರಿದ್ದರು.