Yuvavahini

MAY 27, 2018 4.15 PM IST

ಯುವವಾಹಿನಿ (ರಿ) ಕೂಳೂರು ಘಟಕ

ಸಂಘಟನೆ ಮತ್ತು ಸಮಾನತೆಯಿಂದ ಯುವ ಜನತೆಯ‌ ಯಶಸ್ಸು ಸಾಧ್ಯ : ನರೇಶ್ ಕುಮಾರ್

ಕೂಳೂರು : ನಮ್ಮ ದೃಷ್ಟಿ ಎತ್ತರಕ್ಕೆ ಇದ್ದಾಗ ಮತ್ತು ಧೃಡ ಚಿತ್ತ ಇದ್ದಾಗ ತಲುಪುವ ಗುರಿ ಹತ್ತಿರವಾಗುತ್ತದೆ ಸಂಘಟನೆಯ ಶಕ್ತಿ ಯುವಸಮುದಾಯದಲ್ಲಿದೆ ಮತ್ತು ಸಮಾನತೆಯಲ್ಲಿದೆ ಹಾಗಾದಾಗ ಯಶಸು ಲಭಿಸುತ್ತದೆ . ನಾಯಕತ್ವಕ್ಕೆ ಅಡಿಪಾಯ ಮುಖ್ಯ ಈ ದಿಶೆಯಲ್ಲಿ ಕೂಳೂರು ಘಟಕದ ಪರಿಶ್ರಮ ಅಭಿನಂದನೀಯ ಮಹಿಳೆಯರಿಗೆ ಅವಕಾಶ ಹೆಚ್ಚಾಗಬೇಕು ಎನ್ನುವ ಕೂಗು ಎಲ್ಲ ಕಡೆ ಇದೆ ಕೂಳೂರು ಘಟಕ ಅದನ್ನು ಅನುಸರಿಸಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ‌ತಿಳಿಸಿದರು.

ಅವರು ದಿನಾಂಕ 27.05.2018 ನೇ ಆದಿತ್ಯವಾರ ಕೂಳೂರು ಚರ್ಚ್ ಹಾಲ್ ನಲ್ಲಿ ಯುವವಾಹಿನಿ (ರಿ) ಕೂಳೂರು ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ದೀಪಕ್ ಪೂಜಾರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪರಾಜ್ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೂಳೂರು ಘಟಕದ ಸಮಾಜಮುಖಿ ಸಾಧನೆಯನ್ನು ಒಳಗೊಂಡ , ಮಧುಶ್ರೀ ಪ್ರಶಾಂತ್ ಸಂಪಾದಕೀಯದಲ್ಲಿ ಮೂಡಿ ಬಂದ ಮಾತೃ ಸ್ಪರ್ಷ ಪುಸ್ತಕವನ್ನು ಕೂಳೂರು ಶ್ರೀ ಕೃಷ್ಣ ಶಿಪ್ಪಿಂಗ್ ನಿರ್ದೇಶಕ ಅನಿಲ್ ಕುಮಾರ್ ಬಿಡುಗಡೆಗೊಳಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರಮೀಳಾ ದೀಪಕ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಅಧ್ಯಕ್ಷ ಜಯಾನಂದ ಅಮೀನ್, ಪ್ರಧಾನ ಕಾರ್ಯದರ್ಶಿ ಸದಾಶಿವ ಸುವರ್ಣ, ಉರುಂದಾಡಿ ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ಗಿರಿಧರ್ ಸನಿಲ್ ಹಾಗೂ ಯುವವಾಹಿನಿ ಕೂಳೂರು ಘಟಕದ ಸಲಹೆಗಾರ ನೇಮಿರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

2018-19 ನೇ ಸಾಲಿನ‌ ಯುವವಾಹಿನಿ ಕೂಳೂರು ಘಟಕದ ನೂತನ‌ ಅಧ್ಯಕ್ಷರಾಗಿ ಲೋಕೇಶ್ ಕೋಟ್ಯಾನ್ ನೇತ್ರತ್ವದ ನೂತನ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಸುಜಿತ್ ರಾಜ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.

SSLC ಹಾಗೂ PUC ಯಲ್ಲಿ ಶ್ರೇಷ್ಠ ಸಾಧನೆ ಮಾಡಿದ 10 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. 30 ಬಡ ವಿದ್ಯಾರ್ಥಿಗಳಿಗೆ ರೂ.90,000/-ವಿದ್ಯಾರ್ಥಿ ವೇತನ ನೀಡಲಾಯಿತು. ಹಾಗೂ ರೂ 20,000/- ವನ್ನು ಯುವವಾಹಿನಿ ಕೇಂದ್ರ ಸಮಿತಿಯ ವಿದ್ಯಾನಿಧಿ ನೀಡಲಾಯಿತು. ಹಾಗೂ ಕೂಳೂರು ಸರಕಾರಿ ಶಾಲೆಗೆ ರೂ.18,000/- ಮೊತ್ತದ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಚಲನಚಿತ್ರ ನಟ ರಂಜಿತ್ ಸುವರ್ಣ ಹಾಗೂ ಬಾಲಿವುಡ್ ನೃತ್ಯ ಸಂಯೋಜಕ ನಿತೇಶ್ ಕೋಟ್ಯಾನ್ ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.

ಕಾರ್ಯದರ್ಶಿ ವಿನೀತ್ ಕುಮಾರ್ 2017-18 ನೇ ಸಾಲಿನ‌ ವಾರ್ಷಿಕ ವರದಿ ಮಂಡಿಸಿದರು.ಪುಷ್ಪರಾಜ್ ಸ್ವಾಗತಿಸಿದರು, ದೀಕ್ಷಿತ್ ಸಿ.ಎಸ್ ಧನ್ಯವಾದ ನೀಡಿದರು, ಪ್ರತೀಶ್ ಗೌರೀಶ್, ಪವಿತ್ರ ಸಂತೋಷ್, ಸುಜಿತ್ ರಾಜ್ ಐ ಕಾರ್ಯಕ್ರಮ ನಿರೂಪಿಸಿದರು

One thought on “ಸಂಘಟನೆ ಮತ್ತು ಸಮಾನತೆಯಿಂದ ಯುವ ಜನತೆಯ‌ ಯಶಸ್ಸು ಸಾಧ್ಯ : ನರೇಶ್ ಕುಮಾರ್

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!