ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದಿಂದ ವನಮಹೋತ್ಸವ ಕಾರ್ಯಕ್ರಮವು ದಿನಾಂಕ 12.08.2017 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಪಾದೆಯಲ್ಲಿ ನಡೆಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ವಲಯ ಆರಣ್ಯಧಿಕಾರಿ ಶ್ರೀ ಪಿ ಶ್ರೀಧರ್ ಮಾತನಾಡಿ ಅರಣ್ಯ ಸಂಪತ್ತಿನ ಮಹತ್ವ ಅರಿತು ಬಾಳೋಣ, ನೀರಿಗಾಗಿ ಆರಣ್ಯ ಎಂಬ ಘೋಷಣೆಯ ಮೂಲಕ ವನಮಹೋತ್ಸವ ಆಚರಣೆ ಅರ್ಥಪೂರ್ಣವಾಗಿದೆ ಹಾಗೂ ಜಾಗವನ್ನು ಒದಗಿಸಿಕೊಟ್ಟಲ್ಲಿ 50 ಗಿಡಗಳನ್ನು ನೆಟ್ಟು ಸುತ್ತ ಬೇಲಿ ಹಾಕಿ ಕೊಡುವ ಸರಕಾರದ ಉಚಿತ ಯೋಜನೆಯ ಸದುಪಯೋಗ ಪಡೆಯುವಂತೆ ವಿನಂತಿಸಿದರು.. ಕಾರ್ಯಕ್ರಮದಲ್ಲಿ ಕೇOದ್ರ ಸಮಿತಿಯ ಆಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ.ಸಲಹೆಗಾರರಾದ ಅಶೋಕ್ ಕುಮಾರ್ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಲತ ಶಾಲಾ ಎಸ್ ಡಿ ಎಮ್ ಸಿ ಅದ್ಯಕ್ಷ ಶ್ರೀ ನಾರಾಯಣ ಶೆಟ್ಟಿ ಹಾಜರಿದ್ದರು.
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಧ್ಯಕ್ಷೆ ಸುಪ್ರೀತಾ ಪೂಜಾರಿ ಸ್ವಾಗತಿಸಿದರು ಶ್ರೀಮತಿ ರಶ್ಮಿ ವಂದಿಸಿದರು ಶ್ರೀಮತಿ ರವಿಕಲ ಕಾರ್ಯಕ್ರಮ ನೀರೂಪಿಸಿದರು