Yuvavahini

JUN 25, 2017 12.09 PM IST

ಯುವವಾಹಿನಿ (ರಿ) ಕೂಳೂರು ಘಟಕ

ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾಗಿ ಪುಷ್ಪರಾಜ್

 

ನಾನು ನನ್ನದು,ನನ್ನಿಂದ ಎನ್ನುವ ಮಾತಿನಿಂದ ಸ್ವಲ್ಪ ಹೊರಗೆ ಬಂದು ನಾವು ನಮ್ಮದು, ನಮ್ಮೆಲ್ಲರ ಎನ್ನುವ ವಿಶಾಲ ಮನೋಭಾವ ಬೆಳೆಸಿಕೊಂಡರೆ ಆತ್ಮವಿಶ್ವಾಸ ಒಂದನ್ನುಳಿದು ಮಿಕ್ಕೆಲ್ಲವನ್ನೂ ಕಳೆದುಕೊಂಡರೂ ಚಿಂತೆ ಇಲ್ಲ ಎನ್ನುವ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶಗಳನ್ನು ಮುಂದಿಟ್ಟುಕೊಂಡು ಮುನ್ನಡೆದರೆ ನಾವು ಖಂಡಿತಾ ಯಶಸ್ವಿಯಾಗುತ್ತೇವೆ.ಗುರುಗಳ ತತ್ವದಡಿಯಲ್ಲಿ ಹಿರಿಯ ಸದಸ್ಯರ ಮಾರ್ಗದರ್ಶನ ಪಡೆದು ಯುವವಾಹಿನಿ ಕೂಳೂರು ಘಟಕದಿಂದ ಇನ್ನೂ ಉತ್ತಮ ಕಾರ್ಯಕ್ರಮ ನಡೆಸುವಲ್ಲಿ ಶ್ರಮವಹಿಸುತ್ತೇನೆ ಎಂದು ಯುವವಾಹಿನಿ (ರಿ) ಕೂಳೂರು ಘಟಕದ. 2017-18 ನೇ ಸಾಲಿನ ನೂತನ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಕೂಳೂರು ಅಭಿಪ್ರಾಯ ಪಟ್ಟರು.
ಅವರು ದಿನಾಂಕ 25.06.2017 ನೇ ಆದಿತ್ಯವಾರ ಕೂಳೂರು ಚರ್ಚ್ ಹಾಲ್ ನಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಯುವವಾಹಿನಿ (ರಿ) ಕೂಳೂರು ಘಟಕದ 2017-18 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು

ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಜಿತ್’ರಾಜ್’ಇವರಿಗೆ ಅಭಿನಂದನೆ

ಗುರುಹಿರಿಯರ ಆಶೀರ್ವಾದ ,ಸಮಾಜಬಾಂಧವರ ಸಹಕಾರ, ಮಾತಿನಲ್ಲಿ ಹೇಳಿದನ್ನು ತಲೆಯಲ್ಲಿ ಹೊತ್ತುಕೊಂಡು ದುಡಿಯುವ ಯುವವಾಹಿನಿ ಕೂಳೂರು ಘಟಕದ ಸದಸ್ಯರ ಶ್ರಮ ಇವೇ ನಮ್ಮ ಸಾಧನೆಯ ಹಿಂದಿರುವ ಶಕ್ತಿ ಎಂದು ಯುವವಾಹಿನಿ ಕೂಳೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ತಿಳಿಸಿದರು

ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಗೌರವಾಧ್ಯಕ್ಷರಾದ ರಾಘವೇಂದ್ರ ಕೂಳೂರು, ಅಧ್ಯಕ್ಷರಾದ ಜಯಾನಂದ ಅಮೀನ್ ಪುನ್ಕೆಮಾರ್,ಕಾರ್ಯದರ್ಶಿ ಸದಾಶಿವ ಬಿ.ಸುವರ್ಣ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ಡಾ.ಗಣೇಶ್ ಅಮೀನ್ ಸಂಕಮಾರ್,ರಾಜ್ಯ ಬಿ.ಜೆ.ಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ ಸುವರ್ಣ , ಸಂಕಮಾರ್,ಪಂಜಿಮೊಗರು ಉರುಂದಾಡಿ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಗಿರಿಧರ್ ಸನಿಲ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷರಾದ ಸಂಜೀವ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಂಗಳೂರು ತಾಲೂಕುಬಲ ಸಂಘಟನಾ ಕಾರ್ಯದರ್ಶಿ ಹರೀಶ್ ಕೆ.ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು..

             ಯುವವಾಹಿನಿ (ರಿ) ಕೂಳೂರು ಘಟಕದ 2017-18 ನೇ ಸಾಲಿನ ಪದಾಧಿಕಾರಿಗಳು

2017-18 ನೇ ಸಾಲಿನ ಪದಾಧಿಕಾರಿಗಳು

ಅಧ್ಯಕ್ಷರು : ಪುಷ್ಪರಾಜ್ ಕುಮಾರ್
ಉಪಾಧ್ಯಕ್ಷರು : ಲೋಕೇಶ್ ಕೋಟ್ಯಾನ್
ಕಾರ್ಯದರ್ಶಿ : ವಿನೀತ್ ಪೂಜಾರಿ
ಕೋಶಾಧಿಕಾರಿ : ದೀಕ್ಷಿತ್ ಸಿ.ಎಸ್.ಪೂಜಾರಿ
ಸಂಘಟನಾ ಕಾರ್ಯದರ್ಶಿ : ಭಾಸ್ಕರ್ ಕೊಟ್ಯಾನ್

ನಿರ್ದೇಶಕರು
ವ್ಯಕ್ತಿತ್ವ ವಿಕಸನ :  ಪವಿತ್ರಾ ಅಂಚನ್
ಕ್ರೀಡೆ ಮತ್ತು ಸಮಾಜ ಸೇವೆ :  ಪವಿತ್ರಾ ಕೆ.ಸುವರ್ಣ
ಸಾಂಸ್ಕೃತಿಕ ಮತ್ತು ಸಾಹಿತ್ಯ : ಶಿವಪ್ರಸಾದ್
ಆರೋಗ್ಯ :  ಪವಿತ್ರಾ ಯು.ಅಮೀನ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ :  ರೇಣುಕಾ ಕೂಳೂರು
ವಾರ್ತಾ ಮತ್ತು ಪ್ರಚಾರ : ಅಕ್ಷಿತ್ ಸಿ.ಎಸ್.ಪೂಜಾರಿ
ಕುಟುಂಬ ಸಂಪರ್ಕ :  ರೋಹಿಣಿ ಜಗದೀಶ್ ಸನಿಲ್
ನಾರಾಯಣಗುರು ತತ್ವ ಪ್ರಚಾರ : ಲತೀಶ್ ಪೂಜಾರಿ
ಮಹಿಳಾ ಸಂಘಟನೆ :  ತುಳಸಿ ಸುಜೀರ್
ವಿದ್ಯಾನಿಧಿ : ಲೋಕೇಶ್ ಪೂಜಾರಿ
ವಿದ್ಯಾರ್ಥಿ ಸಂಘಟನೆ : ನಿಶಿತ್

ವರದಿ : ವಿನೀತ್ ಪೂಜಾರಿ ಕಾರ್ಯದರ್ಶಿ,ಯುವವಾಹಿನಿ (ರಿ) ಕೂಳೂರು ಘಟಕ

 

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!