Yuvavahini

JUN 30, 2017 8.21 AM IST

ರವಿರಾಜ್ ಅಜ್ರಿ : ವಿಶುಕುಮಾರ್ ಎಂಬ ಬರಹಗಾರನ ಕಥೆ- 8

ಕಥೆಗಳಲ್ಲಿ ಸಮುದಾಯದ ಭಾಷಾಚಿತ್ರಣ : ವಿಶುಕುಮಾರ್ ಹೀಗೊಂದು ನೆನಪು …..

ವಿಶುಕುಮಾರ್ ಅವರ  ಹೆಚ್ಚಿನ ಕಥೆಗಳನ್ನು ತನ್ನ 20 ರ ಹರೆಯದಿಂದ 30 ರ ನಡುವಿನ ಒಳಗೆ ಬರೆದ ಕಥೆಗಳಾಗಿವೆ.ಆಗ ಅವರ ಕಥೆಗಳಲ್ಲಿ ಕ್ರಾಂತಿಯ ಧ್ವನಿ ಅಷ್ಟೊಂದು ಇರದೆ, ತಮ್ಮ ಬದುಕಿನ ಘಟನೆಗಳ ಸೂಕ್ಷ್ಮ ನೋಟಗಳಿದ್ದವು. ಪ್ರಕೃತಿ ಪರಿಸರದ ಬಗ್ಗೆ ಚಿತ್ರಣಗಳಿದ್ದವು. ಹಾಗೆ ಪತ್ರಿಕೆಗಳಿಗೆ ತಾನು ಬೆಳೆದ ಪರಿಸರದ ಇತಿಹಾಸದ ಬಗ್ಗೆ ಬರೆದು, ಓದುಗರನ್ನು ಚಿಂತನೆಗೆ ಹಚ್ಚುವ ಲೇಖನಗಳನ್ನು ಬರೆಯುತ್ತಿದ್ದರು.

1958 ರಲ್ಲಿ ” ಅದೃಷ್ಟದ ಆಟ”– ಎಂಬ ಕಥೆಯನ್ನು ‘ ನವಭಾರತ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕಥೆಯಲ್ಲಿ ತುಳುನಾಡಿನ ಪರಿಸರ, ನದಿ, ದೋಣಿ, ಗಾಳ ಹಾಕಿ ಮೀನು ಹಿಡಿಯುವ ರೀತಿ ಇತ್ಯಾದಿ ವಿವರಣೆಗಳಿದ್ದವು. ಅದೊಂದು ವಿಡಂಬನಾತ್ಮಕ ನಿರೂಣೆಯ ಕಥೆಯಾಗಿದೆ.

1960 ರಲ್ಲಿ ‘ ಪ್ರಜಾಮತ’ ದಲ್ಲಿ ” ಎಲ್ಲಿದ್ದಾನೆ ದೇವರು “ ಕಥೆ ಪ್ರಕಟವಾಗಿತ್ತು. ಇದು ಮೂಢನಂಬಿಕೆಗೆ ಸವಾಲೆಸೆಯುವ ವಸ್ತು ಈ ಕಥೆಯಲ್ಲಿದೆ. ಹಾಗೆ ಅದೇ ವರ್ಷ ಪ್ರಜಾಮತದಲ್ಲಿ ‘ ಸುಮಶರ’ ಹೆಸರಿನಲ್ಲಿ ” ಚೈತನ್ಯ” ಕಥೆ ಪ್ರಕಟನೆಗೊಂಡಿತು. ಭ್ರಮನಿರಸನಗೊಂಡ ಚಿತ್ರಕಲಾವಿದನ ಬದುಕಿಗೆ ಚೈತನ್ಯ ತುಂಬಿದ ಕಥೆ.
ಸಂಯುಕ್ತ ಕರ್ನಾಟಕದಲ್ಲಿ 1962 ರಲ್ಲಿ “ ಒಂದು ಮಗು ಇಬ್ಬರು ತಾಯಿ” ಕಥೆ ಪ್ರಕಟವಾಗಿತ್ತು. ಬಂಜೆ ಹೆಂಗಸೊಬ್ಬಳು ಪುತ್ರವಾತ್ಸಲ್ಯಕ್ಕಾಗಿ ಪರಿತಪಿಸುವ ಕಥಾವಸ್ತು. ಹಾಗೇ ಅದೇ ವರ್ಷ ಸಂಯುಕ್ತ ಕರ್ನಾಟಕದಲ್ಲಿ ” ಕೊನೆಯ ಅಂಕ” ಕಥೆ ಪ್ರಕಟಗೊಂಡಿತು. ರಂಗಭೂಮಿಯ ನಟ – ತನ್ನನ್ನು ಸಂಶಯದಿಂದ ಕಂಡ ಪ್ರೇಯಸಿಯ ಮಾತಿಗೆ ನೊಂದು ರಂಗಭೂಮಿಯಲ್ಲಿ ನಟಿಸಿರುವಾಗಲೇ ರಂಗಭೂಮಿಯ ಮೇಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಕಥಾವಸ್ತು. ಕಥೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ ವಿಶುಕುಮಾರ್ ಅವರು.ಅದೇ ವರ್ಷ ‘ ಪ್ರಜಾಮತ’ ದಲ್ಲಿ ” ಭೂಕಂಪ” ಕಥೆ ‘ ಸುಮಶರ’ ಕಾವ್ಯನಾಮದಲ್ಲೂ ; ಹಾಗೇ ಮತ್ತೊಂದು ನವಭಾರತದಲ್ಲಿ ” ಹಣ್ಣು ಮತ್ತು ಹೆಣ್ಣು” ಕಥೆಗ ಳು ಪ್ರಕಟಗೊಂಡವು. ‘ ಭೂಕಂಪ’ ಕಥೆಯಲ್ಲಿ ಆಪತ್ತನ್ನು ಎದುರಿಸುತ್ತಿರುವ ಓರ್ವ ವಿವಾಹಿತ ಹೆಣ್ಣು ಅದನ್ನು ನಿವಾರಿಸಲು ಹೋಗಿ ತೊಂದರೆಗೆ ಸಿಲುಕುವ ಕಥೆ. ಈ ಕಥೆ ಓರ್ವ ಕಥೆಗಾರನ ವ್ಯಥೆಯನ್ನು ನಿವೇದಿಸುತ್ತದೆ.

ಹಾಗೇ ಇನ್ನೆರಡು ಕಥೆಗಳು 1962 ರಲ್ಲಿ ‘ ಇಂದ್ರ ಧನಸು’ ಪತ್ರಿಕೆಯಲ್ಲಿ “ ಪರಾಜಿತ” ವೂ; ಪಂಚಾಮೃತ ಪತ್ರಿಕೆಯಲ್ಲಿ ‘ ತಲೆ ಬುರುಡೆ’ ಕಥೆಗಳು ಪ್ರಕಟಗೊಂಡವು. ಹುಡುಗಿಯರನ್ನು ಛೇಡಿಸುವ ಪೋಲಿ ಹುಡುಗರಿಗೆ ಪಾಠ ಕಲಿಸುವ ಕನ್ಯೆಯೊಬ್ಬಳ ಕಥೆ ” ಪರಾಜಿತ” ವಾದರೆ, ಕೊಪ್ಪರಿಗೆ ಹಿನ್ನಲೆಯಲ್ಲಿ ಮನುಷ್ಯ ಸ್ವಭಾವವನ್ನು ಅಳೆಯುವ ” ತಲೆ ಬುರುಡೆ” ಕಥೆಯಾಗಿದೆ.
1963 ರಲ್ಲಿ ‘ ಉಪಕಾರವೋ ಅಪಕಾರವೊ? ‘ ಮಲ್ಲಿಗೆಯಲ್ಲೂ ; ‘ ಇಂದ್ರ ಧನಸು’ ಪತ್ರಿಕೆಯಲ್ಲಿ ‘ ಶಾಲಿನಿ ಏಕೆ ತಪ್ಪಿಸಿ ಕೊಂಡಳು? ‘; ‘ ಹೂ ಹಾರ ಹಾಕಿದರು ‘- ಕಥೆಗಳು ಪ್ರಕಟಗೊಂಡವು.

‘ ಉಪಕಾರವೋ ಅಪಕಾರವೊ?’ ಒಂದು ಸತ್ಯ ಘಟನೆ ನಡೆದ ಕಥೆ. ಲೇಖಕ ವಿಶುಕುಮಾರ್ ಅವರೇ ಈ ಕಥೆಯಲ್ಲಿ ಪಾಲುಗೊಳ್ಳುತ್ತಾರೆ. ಲೇಖಕ ವಾಸಿಸುವ ಪ್ರದೇಶದ ಮುಂದುಗಡೆ ಕುದುರು ಇದೆ( ನಾಲ್ಕು ಕಡೆ ಸುತ್ತ ನೀರು, ಮಧ್ಯೆ ಭೂಮಿ). ಇಲ್ಲಿ ಹತ್ತಿಪ್ಪತ್ತು ಕುಟುಂಬಗಳು ವಾಸಿಸುತ್ತವೆ. ಕುದುರುವಿನಲ್ಲಿ ಕಳ್ಳತನದಿಂದ ಸಾರಾಯಿ ಮಾರಾಟವಾಗುತ್ತಿದೆ.

ಕುದುರುವಿನಲ್ಲಿ ತರಕಾರಿ ಮಾರುವ ಹುಡುಗಿಯಿರುತ್ತಾಳೆ. ಅವಳ ಮದುವೆಗೆ ಲೇಖಕನ ತಾಯಿ ಸಹಾಯ ಮಾಡುತ್ತಾರೆ .ಸಾರಾಯಿ ಮಾರುವವನನ್ನು ಪೊಲೀಸರಿಗೆ ಹಿಡಿಯುವಲ್ಲಿ ಲೇಖಕ ಸಹಾಯ ಮಾಡುತ್ತಾನೆ. ಆದರೆ ಪೊಲೀಸರು ಆರೆಸ್ಟ್ ಮಾಡುವ ವ್ಯಕ್ತಿ ಬೇರೆ ಯಾರೂ ಆಗಿರದೇ-ಹುಡುಗಿಯನ್ನು ಮದುವೆಯಾಗುವ ಹುಡುಗನಾಗಿರುತ್ತಾನೆ! ಹಾಗೇ ಲೇಖಕ ‘ಅಪಾರದವೋ ಉಪಕಾರವೊ?’ ಎಂಬ ಚಿಂತನೆಗೆ ಒಳಗಾಗುತ್ತಾನೆ. ತೀರ್ಮಾನ ಓದುಗರ ಮೇಲೆ ಬಿಟ್ಟಿರುತ್ತಾರೆ.’ ಶಾಲಿನಿ ಏಕೆ ತಪ್ಪಿಸಿದಳು?’ ನಾಟಕದ ನಿರ್ದೇಶಕನಾದವನು ಲೇಖಕನ ಕೃತಿಯನ್ನು ಕೃತಿ ಚೌರ್ಯ ನಡೆಸಿ, ತನ್ನದೇ ಹೆಸರಿನಲ್ಲಿ ನಾಟಕ ಪ್ರದರ್ಶಿಸಲು ತೊಡಗಿದಾಗ- ಲೇಖಕ ನಾಟಕದ ನಾಯಕಿಯನ್ನು ಬಳಸಿಕೊಂಡು ನಿರ್ದೇಶಕನಿಗೆ ಬುದ್ದಿ ಕಲಿಸುವುದೇ ಕಥಾವಸ್ತು.

‘ ಹೂ ಹಾರ ಹಾಕಿದರು’- ಗ್ರಾಮೀಣ ಪ್ರದೇಶದ ಶಾಲೆಯ ಸ್ಥಿತಿ-ಗತಿಯನ್ನು ಈ ಕಥೆ ನಿರೂಪಿಸುತ್ತದೆ.
1964 ರಲ್ಲಿ ‘ ಓಡಿ ಹೋದ ಕತೆ ‘ ಮಲೆನಾಡ ಮಲ್ಲಿಗೆಯಲ್ಲೂ ; ‘ ದಡದಲ್ಲಿ ಒಂದು ನೌಕೆ ‘ – ತರಂಗಿಣಿ; ‘ ಹರಾಜು’ – ಸಂಯುಕ್ತ ಕರ್ನಾಟಕದಲ್ಲಿ ; ‘ ಚೆಲ್ಲಾಟದ ಚದುರೆಯರು’ ಕೈಲಾಸ ಪತ್ರಿಕೆ ; ‘ ಚಿನ್ನದ ನಾಣ್ಯ ‘ ಸಂಯುಕ್ತ ಕರ್ನಾಟಕದಲ್ಲೂ ; ‘ ಬಾಳಿಕೆ’- ಮಲ್ಲಿಗೆಯಲ್ಲೂ- ಮುಂತಾದ ಕಥೆಗಳು ಪ್ರಕಟಗೊಂಡಿವೆ .

‘ ಓಡಿ ಹೋದ ಕಥೆ’ – ಕಥೆಯ ಹೆಸರೇ ನಮಗೆ ತಿಳಿಸುತ್ತದೆ. ತಂದೆ-ತಾಯಿಗಳ ಹಿಡಿತಕ್ಕೆ ಸಿಗದ ಇಬ್ಬರು ಪೋಲಿ ಹುಡುಗರು ಸಿನಿಮಾ ಹುಚ್ಚಿನಿಂದ ಬೆಂಗಳೂರಿಗೆ ಓಡಿ ಹೋಗುವ ಕಥೆ. ‘ ದಡದಲ್ಲಿ ಒಂದು ನೌಕೆ ‘– ಗ್ರಂಥಾಲಯದಲ್ಲಿ ಲೈಬ್ರರಿಯನ್ ಆಗಿದ್ದ ಯುವಕನನ್ನು ಚೆಲುವೆಯೊಬ್ಬಳು ಪ್ರೇಮಿಸುವ ಕಥೆ. ಪತ್ರದ ಮೂಲಕವೇ ವ್ಯವಹಾರ ನಡೆಯುತ್ತದೆ. ಪ್ರೇಮದ ಕುರಿತು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

‘ ಹರಾಜು’ – ಇದು ಪತ್ತೇದಾರಿ ಶೈಲಿಯಲ್ಲಿರುವ ಕಥೆ. ಒಬ್ಬ ಯುವಕ ಚೆಲ್ಲಾಟದ ಹುಡುಗಿಯರಿಂದ ಎದುರಿಸುವ ಸಂಕಟ, ನಷ್ಟಗಳನ್ನು ‘ ಚೆಲ್ಲಾಟದ ಚದುರೆಯರು’ ಕಥೆ ನಿರೂಪಿಸುತ್ತದೆ. ‘ ಚಿನ್ನದ ನಾಣ್ಯ’ – ಇದು ಪ್ರಾಂಕಾಯಿಸ್ ಕೋಪಿಯ ಮೂಲಕಥೆಯ ಆಧಾರ. ಒಂದು ಚಿನ್ನದ ನಾಣ್ಯ ಒಬ್ಬನ ಬದುಕಿನ ಕ್ರಮವನ್ನೇ ಬದಲಾಯಿಸುವ ರೀತಿ ಕಥೆಯಲ್ಲಿದೆ. ದಕ್ಷಿಣ ಕನ್ನಡದ ಜನ ಬಾಂಬೆಯಲ್ಲಿ ಯಾವ ರೀತಿಯ ಜೀವನ ನಡೆಸುತ್ತಾರೆಂಬ ಚಿತ್ರಣ ‘ ಬಾಳಿಕೆ’ ಕಥೆಯಲ್ಲಿದೆ.

ತುಳು ಜಾನಪದ ಕಥೆಗಳು:

1964 ರಲ್ಲಿ ವಿಶುಕುಮಾರ್ ಅವರು ಎರಡು ತುಳು ಜಾನಪದದಲ್ಲಿರುವ ಕಥೆಗಳನ್ನು ಆಧರಿಸಿ ‘ ಬೊಳ್ಳ ಕಿನ್ಯಗ ‘ ಮತ್ತು ‘ ಕಲಿಯುಗದ ಬಕಾಸುರ ಅಗೋಳಿ ಮಂಜಣ’ ಕಥೆಗಳನ್ನು ಬರೆದಿದ್ದಾರೆ. ಈ ಎರಡೂ ಕಥೆಗಳನ್ನು ‘ ಪ್ರಜಾವಾಣಿ’ ಪತ್ರಿಕೆ ಪ್ರಕಟಿಸಿದ್ದು ವಿಶೇಷವಾಗಿದೆ.

 ಬೊಳ್ಳ ಕಿನ್ಯಗ‘ : ಇದು ತುಳುವಿನ ಜನಪ್ರಿಯ ಪಾಡ್ದನ( ಕಾವ್ಯ) ದ ಕಥೆ. ರಾಜನೊಬ್ಬ ಇಟ್ಟುಕೊಂಡ ಪ್ರಿಯತಮೆಯ ಮತ್ಸರದಿಂದ ಎದುರಿಸುವ ಕಥೆ. ಮಂಗಳೂರು ತಾಲೂಕಿನಿಂದ 6 ಕಿ.ಮೀ. ದೂರವಿರುವ ಕುಡುಪುನಲ್ಲಿರುವ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೂ ಈ ಕಥೆಗೂ ಸಂಬಂಧವಿದೆ.

ಕಲಿಯುಗದ ಬಕಾಸುರ ಅಗೋಳಿ ಮಂಜಣ’ : ಇದು ಕುಡಾ ತುಳುವಿನ ಜನಪ್ರಿಯ ಜಾನಪದ ಕಥೆ. ಇದು ಕಾಲ್ಪನಿಕ ಕಥೆಯಲ್ಲ. ತುಳುನಾಡಿನಲ್ಲಿ ನಡೆದ ಸತ್ಯ ಘಟನೆಯೇ ಕಥಾವಸ್ತು.

ಕಥೆಗಳ ಯಶಸ್ಸಿಗೆ ಭಾಷಾ ಶೈಲಿ ಮುಖ್ಯವಾಗುತ್ತದೆ. ಒಬ್ಬ ಕತೆಗಾರ ತನ್ನ ಸಮುದಾಯದ ಭಾಷೆಯನ್ನು ಸಂರಕ್ಷಿಸಿ, ಶುದ್ದವಾಗಿರುವುದು ಆತನ ಮೊದಲ ಹೊಣೆ ಎಂದು ಖ್ಯಾತ ವಿಮರ್ಶಕ ಜಿ. ಎನ್. ಅಮೂರರ ಅನಿಸಿಕೆ. ಈ ನಿಟ್ಟಿನಲ್ಲಿ ವಿಶುಕುಮಾರ್ ಅವರು ಯಶಸ್ವಿಯಾಗಿದ್ದಾರೆ.

ವಿಶುಕುಮಾರ್ ಅವರು ತುಳುನಾಡಿನ ಇತಿಹಾಸ, ಮರೆತುಹೋದ ಪ್ರಾದೇಶಿಕ ವೈಶಿಷ್ಟ್ಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಲೇಖನ ಬರೆದು ಬೆಳಕು ಚೆಲ್ಲಿದ್ದಾರೆ. ಅದು ಕೂಡ ಮೂವತ್ತರ ಹರೆಯದ ಒಳಗೆ ಬರೆದ ಲೇಖನಗಳಾಗಿವೆ.

One thought on “ಕಥೆಗಳಲ್ಲಿ ಸಮುದಾಯದ ಭಾಷಾಚಿತ್ರಣ : ವಿಶುಕುಮಾರ್ ಹೀಗೊಂದು ನೆನಪು …..

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!