ಬಂಟ್ವಾಳ ತಾಲೂಕಿನ ಕಕ್ಯಪದವು LCR ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರೋಹಿನಾಥ್ ಪಾದೆ ಹಾಗೂ ಬಬಿತಾ ದಂಪತಿಗಳ ಸುಪುತ್ರಿ ಜಯಾನಿ ರೋಹಿನಾಥ್ ಈ ಬಾರಿಯ SSLC ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
SSLC ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರುವುದಕ್ಕೆ ಖುಷಿಯಾಗಿದೆ. ಮುಂದೆ ಪದವಿಪೂರ್ವ ಶಿಕ್ಷಣ ಪಡೆಯಲು ಸಂತ ಎಲೋಷಿಯಸ್ ಕಾಲೇಜಿಗೆ ದಾಖಲಾಗಿದ್ದೇನೆ, ವೈದ್ಯೆಯಾಗಬೇಕೆಂಬ ಗುರಿ ಇದೆ.
ನಿಗದಿತ ವೇಳಾಪಟ್ಟಿ ಕ್ರಮಬದ್ಧ ಓದಿನಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.
ಆತ್ಮವಿಶ್ವಾಸದಿಂದ ಓದಿದಾಗ ಉತ್ತಮ ಅಂಕಗಳು ಪಡೆಯಲು ಸಾಧ್ಯ. ಪರೀಕ್ಷಾ ಸಮಯ ಮಾತ್ರವಲ್ಲದೆ ಪ್ರತಿದಿನ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು, ತನ್ನ ಓದಿಗೆ ಮನೆ ಹಾಗೂ ಶಾಲೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದೆ, ಹೀಗಾಗಿಯೇ ಇಷ್ಟು ಅಂಕಗಳು ಬಂದಿದೆ ಎಂದರು.
ಜಯಾನಿ ರೋಹಿನಾಥ್ ಇವರ ತಂದೆ ರೋಹಿನಾಥ್ ಪಾದೆ ಇವರು ರೋಟರಿ ಇಂಟರ್ ನಾಷನಲ್ ಜಿಲ್ಲೆ 3181 (ದಕ್ಷಿಣ ಕನ್ನಡ, ಕೊಡಗು,ಮೈಸೂರು,ಚಾಮರಾಜನಗರ) ಇದರ 2018-19 ,ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುತ್ತಾರೆ. ಬಿಲ್ಲವ ಸಮಾಜದ ಪ್ರಪ್ರಥಮ ವ್ಯಕ್ತಿ ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ.
ಗ್ರಾಮೀಣ ಪ್ರದೇಶ ಕಕ್ಯಪದವಿನಲ್ಲಿ LCR ವಿದ್ಯಾ ಸಂಸ್ಥೆಯ ಸ್ಥಾಪನೆ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಅಪ್ಪನಂತೆ ಮಗಳು ಜಯಾನಿ ರೋಹಿನಾಥ್ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವುದು ಶ್ಲಾಘನೀಯ.
ರೋಹಿನಾಥ್ ಪಾದೆ ಯುವವಾಹಿನಿ(ರಿ) ಮಂಗಳೂರು ಘಟಕದ ಗೌರವ ಸದಸ್ಯರಾಗಿರುತ್ತಾರೆ.
ಜಯಾನಿ ರೋಹಿನಾಥ್ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಯುವವಾಹಿನಿ ಹಾರೈಸುತ್ತದೆ.
Congratulations Rohinath is honourary member of yuvavahini mangalore chapter
Proud father’s proud daughter. We are all proud of you.
Very good
Best of luck in your future
congrats jayani Rohinath pade
Congratulations. ..Froud of You..
Congratulations
Congratulation froud of you.best of luck in ur future
Congrats, all the best for your future
Congratulations, may god bless you.
Congratulations Jayani R Nath pade, prod of you.