Yuvavahini

AUG 10, 2014 11.33 AM IST

ಯುವವಾಹಿನಿ ಯುವ ಸಾಧನಾ ಪುರಸ್ಕಾರ -2014

ಸೀಳು ತುಟಿ ಸಮಸ್ಯೆಯವರ ಆಶಾಕಿರಣ ಡಾ. ಅಶಿತ್ ಎಂ.ವಿ.


ಸೀಳು ತುಟಿ ಸಮಸ್ಯೆಯವರ ಆಶಾಕಿರಣ
ಡಾ. ಅಶಿತ್ ಎಂ.ವಿ.
ಉಪ್ಪಿನಂಗಡಿಯ ರಾಜ್‍ಮಹಲ್ ಎಂ. ವರದ ರಾಜ್ ಮತ್ತು ವಿಮಲಾ ವರದರಾಜ್ ಇವರ ಪುತ್ರರಾಗಿರುವ ಡಾ. ಅಶಿತ್ ಎಂ.ವಿ. ಇವರು ಶಿಕ್ಷಣ ರಂಗದ ಅದ್ವಿತೀಯ ಸಾಧಕ, ತನ್ನ ಪ್ರಾಥಮಿಕ ಹಂತದ ಶಿಕ್ಷಣದ ಸಮಯದಲ್ಲೇ ಸಾಧನೆಯನ್ನು ತೋರಿರುವ ಶ್ರೀಯುತರು ಪ್ರಸ್ತುತ ದಂತ ವೈದ್ಯಕೀಯ ವಿಭಾಗದಲ್ಲಿ ಎಂಡಿಎಸ್ ಪದವಿಯನ್ನು ಪಡೆದಿದ್ದಾರೆ, ವೈದ್ಯಕೀಯ ರಂಗದಲ್ಲಿ ಹೊಸತನಗಳ ಪ್ರಯೋಗಕ್ಕೆ ಸದಾ ತುಡಿಯುತ್ತಾ ಈ ಮೂಲಕದ ಪ್ರಯತ್ನವನ್ನೂ ನಡೆಸುತ್ತಿರುವ ಅಶಿತ್ ಅವರು ಸೀಳು ತುಟಿ ಸಮಸ್ಯೆಯಿಂದ ಬಲಳುತ್ತಿರುವವರ ಆಶಾಕಿರಣ ಎಂದರೂ ತಪ್ಪಾಗಲಾರದು. . International Claft Federation ನವರು ನಡೆಸುವ ಸೀಳು ತುಟಿಯ ಬಗ್ಗೆ ವೈದ್ಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಜಗತ್ತಿನ 40 ಮಂದಿಯಲ್ಲಿ ಇವರು ಒಬ್ಬರು. ಇದು ಇದೇ ಸಪ್ಟೆಂಬರ್ ತಿಂಗಳಲ್ಲಿ ಮಂಗೊಲಿಯದಲ್ಲಿ ನಡೆಯಲಿದೆ. ಮಾತ್ರವಲ್ಲದೆ ಕ್ಲೆಫ್ಟ್ ಮತ್ತು ಕ್ರೇನಿಯೋ ಫೇಸಿಯಲ್ ಆರ್ಥೋಡೊಂಟಿಕ್ಸ್ ಅಂಡರ್ ಸ್ಮೈಲ್ ಟ್ರೈನ್ ಐಎನ್‍ಸಿ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿರುವ ದೇಶದ ಕೇವಲ ಆರು ಭಾರತೀಯರಲ್ಲಿ ಒಬ್ಬರಾಗಿರುವ ಡಾ. ಅಶಿತ್ ಎಂ.ವಿ. ಅವರು ನಮ್ಮವರು ಎನ್ನುವುದೇ ಸಂತೋಷದ ವಿಚಾರ. ಇವರ ಹಲವಾರು ಸಂಶೋಧನೆಗಳು ವೈದ್ಯಕೀಯ ರಂಗದಲ್ಲಿ ಯಶಸ್ಸನ್ನು ಸಾಧಿಸಿದೆ ಎನ್ನುವುದು ವಿಶೇಷ.ಪ್ರಸ್ತುತ ಮಂಗಳೂರಿನ ಯೆನೋಪೊಯ ಮಹಾವಿದ್ಯಾಲಯದ ಆರ್ಥೋ ಡೊಂಟಿಕ್ಸ್ ಮತ್ತು ಡೆಂಟೋ ಫೇಸಿಯಲ್ ಆರ್ಥೋ ಪೆಡಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಕ್ರಾನಿಯೋ ಫೇಸಿಯಲ್ ಎನಾಮಲೀಸ್‍ನ ಆರ್ಥೋ ಡೊಂಟಿಸ್ಟ್‍ನ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿರುವರಲ್ಲದೆ ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಆರ್ಥೋಡೊಂಟಿಕ್ಸ್ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಜಿಲ್ಲೆಯ ಹಲವಾರು ಕಡೆ ಉಚಿತ ದಂತ ವೈದ್ಯಕೀಯ ಶಿಬಿರವನ್ನು ನಡೆಸಿ ಬಡವರಿಗೆ ಉಚಿತ ಸೇವೆ ನೀಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇವರ ಪತ್ನಿ ಡಾ. ಸ್ವೇತ, ದಂತ ವೈದ್ಯೆ ಹಾಗೂ ಓರ್ವ ಮಗ ಅನ್‍ಸೂಲ್. ಇವರ ಶೈಕ್ಷಣಿಕ ಮತ್ತು ಸಂಶೋಧನಾ ಸಾಧನೆಯನ್ನು ಗುರುತಿಸಿದ ಯುವ ವಾಹಿನಿಯು ತನ್ನ 27ನೇ ವಾರ್ಷಿಕ ಸಮಾವೇಶದಲ್ಲಿ 2014ನೇ ಸಾಲಿನ ಯುವವಾಹಿನಿ ಯುವ ಸಾಧನ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸಂತೋಷ ಪಡುತ್ತಿದೆ.

One thought on “ಸೀಳು ತುಟಿ ಸಮಸ್ಯೆಯವರ ಆಶಾಕಿರಣ ಡಾ. ಅಶಿತ್ ಎಂ.ವಿ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!