ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 25.04.2017 ನೇ ಮಂಗಳವಾರದಂದು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಕಛೇರಿಯಲ್ಲಿ ಸಂಚಾರಿ ನಿಯಮಗಳ ಮಾಹಿತಿ ಕಾರ್ಯಾಗಾರ ಜರುಗಿತು.
ಮಂಗಳೂರು ಉತ್ತರ ವಲಯದ ಟ್ರಾಫಿಕ್ ಇನ್ಸ್ಪೆಕ್ಟರ್ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು
ಸಂಚಾರಿ ನಿಯಮಗಳ ಪಾಲನೆ,ಅನಾಹುತಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು
ಯುವವಾಹಿನಿ ಮಂಗಳೂರು ಘಟಕದ ವಾರದ ಸಾಪ್ತಾಹಿಕ ಸಭೆಯಲ್ಲಿ ಜರುಗಿದ ಈ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 75ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದರು
ಮಂಗಳೂರು ಯುವವಾಹಿನಿ ಅದ್ಯಕ್ಷ ರವೀಶ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ನವೀನ್ ಚಂದ್ರ, ಕೇಂದ್ರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಮರೋಳಿ ,ನಿಕಟಪೂರ್ವ ಅದ್ಯಕ್ಷ ಸುನೀಲ್ ಕೆ.ಅಂಚನ್ ,ಸಲಹೆಗಾರಾದ ಸಂಜೀವ ಪೂಜಾರಿ,ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್ ಕಿರೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶೈಕ್ಷಣಿಕ ದತ್ತು ನಿಧಿ ಸಂಚಾಲಕರಾದ ಸತೀಶ್.ಎ ಅವರು ವಂದಿಸಿದರು
Every weekly meeting will become successful provided Good guest speaker is must for lively yuvahini meeting in various avenues of service.
In this direction every member should give more support to our President for grand success.