Yuvavahini

NOV 15, 2026 7.00 PM IST

ಯುವವಾಹಿನಿ(ರಿ) ಬಜಪೆ ಘಟಕ

ಭಜನೆಯಿಂದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ – ಜಯಂತ್ ಸುವರ್ಣ

ವಿಜಯ ವಿಠಲ ಭಜನಾ ಮಂದಿರದಲ್ಲಿ ಯುವವಾಹಿನಿ ಬಜಪೆ ಘಟಕದಿಂದ ಭಜನಾ ಸೇವೆ ಹಾಗೂ ದೇಣಿಗೆ ಹಸ್ತಾಂತರ

ಬಜಪೆ ನ 15 : ಭಜನೆ ಮತ್ತು ದೇವರ ನಾಮಸ್ಮರಣೆಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸಮಾಜದಲ್ಲಿ ಭಕ್ತಿ, ಭಾವೈಕ್ಯತೆ ಹಾಗೂ ಸಮಾನತೆಯ ಮನೋಭಾವ ಬೆಳೆಸುವ ಪ್ರಬಲ ಮಾಧ್ಯಮವಾಗಿದೆ ಎಂದು ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷ ಜಯಂತ್ ಸುವರ್ಣ ಅಭಿಪ್ರಾಯಪಟ್ಟರು.

ವಿಜಯ ವಿಠಲ ಭಜನಾ ಮಂದಿರ ಬಜಪೆ ಇಲ್ಲಿ ನಡೆಯುತ್ತಿರುವ 82ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ನವೆಂಬರ್ 5ರಿಂದ 20ರವರೆಗೆ ಪ್ರತಿದಿನ ನಿತ್ಯ ಭಜನೆ ಹಾಗೂ ನವೆಂಬರ್ 21ರ ಸೂರ್ಯೋದಯದಿಂದ ನವೆಂಬರ್ 22ರ ಸೂರ್ಯೋದಯದವರೆಗೆ ಏಕಾಹ ಭಜನೆ ಆಯೋಜಿಸಲಾಗಿದೆ. ಇದರ ಅಂಗವಾಗಿ ನವೆಂಬರ್ 15ರಂದು ಸಂಜೆ 7ರಿಂದ 9ರವರೆಗೆ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ನಿತ್ಯ ಭಜನೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಭಜನೋತ್ಸವದ ಅಂಗವಾಗಿ ಪ್ರತಿದಿನ ಅನ್ನಪ್ರಸಾದ ಸೇವೆ ನಡೆಯುತ್ತಿದ್ದು, ನವೆಂಬರ್ 15ರಂದು ರಾತ್ರಿ 9 ಗಂಟೆಯ ನಂತರ ಯುವವಾಹಿನಿ ಬಜಪೆ ಘಟಕದ ಸದಸ್ಯರು ಅನ್ನಪ್ರಸಾದ ವಿತರಿಸುವ ಸೇವೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಶ್ರೀ ವಿಜಯ ವಿಠಲ ದೇವರ ಪ್ರಸಾದ ಸ್ವೀಕರಿಸಿದ ಬಳಿಕ, 2027ರ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿರುವ ಮಂದಿರದ ನೂತನ ಸಭಾಭವನದ ಕಟ್ಟಡ ನಿರ್ಮಾಣಕ್ಕೆ ಯುವವಾಹಿನಿ ಬಜಪೆ ಘಟಕದ ವತಿಯಿಂದ ₹5,000 ದೇಣಿಗೆಯನ್ನು ನೀಡಲಾಯಿತು. ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಅವರು ಮಂದಿರದ ಅಧ್ಯಕ್ಷ ಜಯಂತ್ ಸುವರ್ಣ ಅವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯಂತ್ ಸುವರ್ಣ ಅವರು, ಯುವವಾಹಿನಿಯು ಉತ್ತಮ ಸಮಾಜಮುಖಿ ಸಂಸ್ಥೆಯಾಗಿದ್ದು, ವಿವಿಧ ಸೇವಾ ಕಾರ್ಯಗಳ ಜೊತೆಗೆ ಮನೆಮನೆ ಭಜನೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ದೇವರ ನಾಮಸ್ಮರಣೆಯ ಮೂಲಕ ಸಮಾಜದಲ್ಲಿ ಭಕ್ತಿ ಮತ್ತು ಸಾಮರಸ್ಯವನ್ನು ಬೆಳೆಸುತ್ತಿದೆ. ನಾರಾಯಣ ಗುರುಗಳ ಸಮಾನತೆಯ ತತ್ವದಂತೆ ಜಾತಿಭೇದವಿಲ್ಲದ ಸಮಾಜ ನಿರ್ಮಾಣಕ್ಕೆ ಇಂತಹ ಚಟುವಟಿಕೆಗಳು ಪೂರಕವಾಗಿವೆ ಎಂದು ಶ್ಲಾಘಿಸಿದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : ನವೆಂಬರ್ 20, 2026
ಸ್ಥಳ : ಅಡ್ಯಾರ್ ಗಾರ್ಡನ್ ಮಂಗಳೂರು

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿಯ ನೂತನ ಆಡಳಿತ ಕಚೇರಿ ಲೋಕಾರ್ಪಣೆ

ನಾಲ್ಕು ದಶಕಗಳ ಸಂಘಟನಾ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲು – ಸಮಾಜಮುಖಿ ಸೇವೆಗೆ ಶಾಶ್ವತ ಕೇಂದ್ರದ ಸಾರ್ಥಕ ಕನಸು ನನಸು ಮಂಗಳೂರು ನ 15 : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಬಹುದಿನಗಳ ಕನಸಾದ ನೂತನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭವು ನವೆಂಬರ್...

Sunday, 15-11-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರಿಗೆ 2026ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ

ಉಡುಪಿ ನ 01 : “ವಿದ್ಯೆ, ಉದ್ಯೋಗ, ಸಂಪರ್ಕ” ಎಂಬ ಧ್ಯೇಯವಾಕ್ಯದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ.) ಉಡುಪಿ ಘಟಕದ...

Sunday, 01-11-2026

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
error: Content is protected !!