Yuvavahini

NOV 16, 2026 9.45 AM IST

ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಯುಕ್ತ "ವಿಶು ಕಾವ್ಯಾಮೃತ"

ರಾಜ್ಯ ಮಟ್ಟದ ಕವನ ಸ್ಪರ್ಧೆ : ಪ್ರಥಮ ಬಹುಮಾನ : ಅಲೆಗಳಾಚೆಯ ಅಸ್ಮಿತೆ ✍️ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್ ಮೂಡುಬಿದಿರೆ

ಅಲೆಗಳಾಚೆಯ ಅಸ್ಮಿತೆ

ಸಾಗರದ ಅಲೆಗಳ ಮಡಿಲಲಿ ಮಿಂದೆದ್ದ ಮಣ್ಣಿದು,
ಸಹ್ಯಾದ್ರಿಯ ಹಸಿರ ಸೆರಗಲಿ ನಲಿದಾಡುವ ನಾಡಿದು.
ಪರಶುರಾಮನ ಸೃಷ್ಟಿಯೆಂಬ ಪುರಾಣದ ಪುಣ್ಯಭೂಮಿ,
ಪರಂಪರೆಯ ಬೆಳಕ ಸೂಸುವ ಸಂಸ್ಕೃತಿಯ ತವರೂರು ಈ ಭೂಮಿ

ಯಕ್ಷಗಾನದ ಬಣ್ಣದಲಿ ಪುರಾಣಗಳು ಜೀವ ತಳೆಯುವವು
ಚೆಂಡೆ ಮದ್ದಳೆಯ ನಾದದಲಿ ರಾತ್ರಿಗಳು ರಂಗೇರುವವು
ಭೂತಾರಾಧನೆಯ ನಂಬಿಕೆಯಲಿ ದೈವದ ನುಡಿ ಮೊಳಗುವುದು
ಕಂಬಳದ ಕೆಸರುಗದ್ದೆಯಲಿ ವೀರದ ಕಿಚ್ಚು ಹೊತ್ತುವುದು

ತುಳುವಿನ ಸೊಗಸಿನಲಿ ಮಣ್ಣಿನ ಮಮತೆ ಹರಿಯುವುದು
ಕೊಂಕಣಿಯ ಮಧುರತೆಯಲಿ ಬಂಧುತ್ವದ ಬೆಸುಗೆ ಅರಳುವುದು
ಬ್ಯಾರಿಯ ನುಡಿಯೊಳಗೆ ಸೌಹಾರ್ದದ ಸುಗಂಧ ಸೂಸುವುದು
ಕನ್ನಡದ ಕಾವ್ಯಧಾರೆಯಲಿ ಕರಾವಳಿಯ ಹಿರಿಮೆ ಮಿನುಗುವುದು

ಕಡಲ ಕಿನಾರೆಯ ತೆಂಗಿನ ಮರ ಗಾಳಿಗೆ ತಲೆದೂಗುವುದು
ನೇತ್ರಾವತಿ, ಶರಾವತಿಯ ಒಡಲಲಿ ಬದುಕು ಅರಳುವುದು
ಉಪ್ಪಿನ ಗಾಳಿಯ ನಡುವೆಯೂ ದುಡಿಮೆಯ ಬೆವರು ಮಿನುಗುವುದು
ಮೀನುಗಾರನ ಬಲೆಯೊಳಗೆ ಕುಟುಂಬದ ಕನಸು ನಲಿಯುವುದು

ಅಬ್ಬಕ್ಕನ ಕಿಚ್ಚು, ಮಂಜಣ್ಣನ ಶೌರ್ಯ ಇತಿಹಾಸದಲಿ ಅಮರ,
ವೀರರ ತ್ಯಾಗದ ಕೀರ್ತಿಪತಾಕೆ ಹಾರಲಿ ಅಂಬರದಾಚೆ ನಿರಂತರ.
ಕಡಲ ಅಲೆಗಳ ಮೊಳಗಲಿ ಕನ್ನಡದ ಹಿರಿಮೆಯ ಗಾನ,
ಕರಾವಳಿಯ ಕೀರ್ತಿಕಿರೀಟ ಹೊಳೆಯಲಿ ಜಗದಲಿ ಚಿರಕಾಲ.

-✍️ಪೂರ್ಣಿಮಾ ಕೋಟ್ಯಾನ್ ಮಾರ್ನಾಡು , ಮೂಡಬಿದಿರೆ

ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಮೂಡಬಿದಿರೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!