ಮಂಗಳೂರು ನ 09 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 09-11-2026 ರಂದು ಸಂಜೆ ನಡೆಯಿತು.

ಈ ವಾರದ ಭಜನಾ ಸೇವೆ ಶಾರದಾ ಭಜನ್ಸ್ ಉಳ್ಳಾಲ ಇವರ ಸಹಯೋಗದಲ್ಲಿ ನೆರವೇರಿತು. ಸುಮಧುರ ರಾಗ ತಾಳಗಳಿಂದ ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಭಜನಾ ತಂಡದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.
ಇಂದಿನ ಸಾಪ್ತಾಹಿಕ ಭಜನಾ ಸಂಕೀರ್ತನೆಯ ಸೇವೆ ನೀಡಿದ ಶಾರದಾ ಭಜನ್ಸ್ ಉಳ್ಳಾಲ ತಂಡಕ್ಕೆ ಮಂಗಳೂರು ಘಟಕದ ಅಧ್ಯಕ್ಷರು ಹರೀಶ್ ಕೆ ಸುವರ್ಣ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು ಹರೀಶ್ ಕೆ ಸುವರ್ಣ, ಕಾರ್ಯದರ್ಶಿ ಉಷಾ, ನಾರಾಯಣ ಗುರು ತತ್ವ ಆದರ್ಶಗಳ ನಿಕಟಪೂರ್ವ ನಿರ್ದೇಶಕರಾದ ಪೂವಪ್ಪ ಕುಕ್ಯಾನ್, ಘಟಕದ ಸದಸ್ಸರಾದ ಭಾಸ್ಕರ ಪೂಜಾರಿ, ಸತೀಶ್ ಕೆ ಉಪಸ್ಥಿತರಿದ್ದರು.







