ಮಂಗಳೂರು ನ 02 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 02-11-2026 ರಂದು ಸಂಜೆ ನಡೆಯಿತು.

ಈ ವಾರದ ಭಜನಾ ಸೇವೆ ಸ್ಪೂರ್ತಿ ಮಹಿಳಾ ಭಜನಾ ಮಂಡಳಿ, ಪದವಿನಂಗಡಿ ಇವರ ಸಹಯೋಗದಲ್ಲಿ ನೆರವೇರಿತು. ಭಕ್ತಿ ಪೂರ್ವಕವಾಗಿ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು.
ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಭಜನಾ ತಂಡದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು. ಗುರು ಪೂಜೆಯ ನಂತರ ಇಂದಿನ ಭಜನಾ ಸೇವೆಯ ತಂಡಕ್ಕೆ ಮಂಗಳೂರು ಘಟಕದ ಅಧ್ಯಕ್ಷರು ಹರೀಶ್ ಕೆ ಸುವರ್ಣ ಇವರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು ಹರೀಶ್ ಕೆ ಸುವರ್ಣ, ನಾರಾಯಣ ಗುರು ತತ್ವ ಆದರ್ಶಗಳ ನಿಕಟಪೂರ್ವ ನಿರ್ದೇಶಕರಾದ ಪೂವಪ್ಪ ಕುಕ್ಯಾನ್, ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.







