Yuvavahini

OCT 30, 2026 11.46 AM IST

ವಿಶುಕುಮಾರ್ ಹೀಗೊಂದು ನೆನಪು : ರವಿರಾಜ ಅಜ್ರಿ ಲೇಖನ ಮಾಲೆ 6

ಬಹುವ್ಯಕ್ತಿತ್ವದ ವಿಶುಕುಮಾರ್ ತಂದೆಯ ಬಳುವಳಿ…..

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಹತ್ತು ವರ್ಷ ಮೊದಲೇ ವಿಶುಕುಮಾರ್ ಹುಟ್ಟಿದ್ದು. ಆಗಿನ ಸಮಾಜದ ವ್ಯವಸ್ಥೆಯನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಾಲೀಕರು, ವರ್ಣದ್ವೇಷದ ಪ್ರಭಾವವಿದ್ದ ಕಾಲ. ದೇಶದ ಸ್ವತಂತ್ರಕ್ಕಾಗಿ ಇಂಗ್ಲೀಷರ ವಿರುದ್ಧ ಹೋರಾಟದ ದಿನಗಳು. ಆದರೆ ವಿಶುಕುಮಾರ್ ಮನೆತನ ಅಂಥ ಸಂದಿಗ್ಧತೆಗೆ ಒಳಪಟ್ಟಿರಲಿಲ್ಲ.

ದೋಗ್ರ ಪೂಜಾರಿ

ದೋಗ್ರ ಪೂಜಾರಿ ಅವರು ಯಕ್ಷಗಾನ ಕಲಾರಸಿಕರು. ಅವರ ಆಡಳಿತದಲ್ಲಿದ್ದುದು 10 ಮುಡಿ ಗೇಣಿ ಬರುವ ವರ್ಗದಾರರು. ಅವಳಿ ಜಿಲ್ಲೆ( ಉಡುಪಿ- ಮಂಗಳೂರು) ಗಳಲ್ಲಿ ಬಿಲ್ಲವ ಸಮಾಜದವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಕೈ ಬೆರಳೆಣಿಕೆಯಷ್ಟು ವರ್ಗದಾರ ಧನಿಕರಾಗಿದ್ದರು. ಉಳಿದವರು ಕೃಷಿ ಗೇಣಿದಾರರು ಹಾಗೂ ಕಾರ್ಮಿಕರಾಗಿದ್ದರು.
10 ಮುಡಿ ಗೇಣಿಯಲ್ಲಿ ತಿಂಗಳಿಗೆ ಸರಾಸರಿ ೧ ಮುಡಿಯೂ ಬರುವುದಿಲ್ಲ. ಇದರಲ್ಲಿ ಊಟ, ಬಟ್ಟೆ-ಬರೆ ಇತರ ಖರ್ಚುಗಳಿಗೆ ಏನು ಸಿಗುತ್ತದೆ. ಇದನ್ನರಿತ ದೋಗ್ರ ಪೂಜಾರಿಯವರು ಇತರ ಸಂಪಾದನೆಗೆ ಸಣ್ಣ ಹೋಟೆಲ್ ಉದ್ದಿಮೆ ನಡೆಸಿಕೊಂಡು ಬಂದಿರುವುದು. ಕಲೆಯನ್ನು ಹವ್ಯಾಸಿಯಾಗಿ ಬೆಳೆಸಿಕೊಂಡು ಬಂದರು.
ಬಹಳ ಸೂಕ್ಷ್ಮಮತಿ ವಿಶುಕುಮಾರ್. ಆಗಿನ್ನು ಅವರು ವಿಶುಕುಮಾರ್ ಆಗಿರಲಿಲ್ಲ. ತಂದೆ ಇಟ್ಟ ಹೆಸರು ವಿಶ್ವನಾಥ್. ತನ್ನ ಆರನೆ ವಯಸ್ಸಿಗೆ ಉರ್ವದ ಸಿದ್ದಿ ಶಾಲೆಗೆ ಸೇರಿದರು. ಅದು 1942
ಆ ನಂತರ 1950 ರಲ್ಲಿ ಬೊಕ್ಕಪಟ್ಣ ಶಾಲೆಯಲ್ಲಿ ಇ. ಎಸ್. ಎಸ್. ಸಿ. ಪಾಸು ಮಾಡಿದರು. ಆ ಬಳಿಕ ಉರ್ವ ಕೆನರಾ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ. ಅಲ್ಲಿ ಮೂರು ವರ್ಷ ಕಲಿಕೆ. 1954 ರಲ್ಲಿ ಎಸ್. ಎಸ್. ಎಲ್. ಸಿ ಮುಗಿಸಿದರು.
ಎಸ್. ಎಸ್. ಎಲ್. ಸಿ ಮುಗಿಯಿತು? ಮುಂದೇನು? ಕಾಲೇಜಿಗೆ ಸೇರಲು ಮನಸ್ಸಿದ್ದರೂ ದುಡ್ಡಿಗೆ ತಾಪತ್ರಯ. ದೊಡ್ಡ ಸಂಸಾರ. ತಂದೆಗೆ ಸಹಾಯ ಮಾಡಲು ವಿಶುಕುಮಾರ್ ನಿಂತರು. ತಮ್ಮದೇ ಹೋಟೆಲ್ ನಲ್ಲಿ ಸಪ್ಲೈ ಮಾಡುವುದರ ಜತೆಗೆ ಗ್ಲಾಸು, ಪ್ಲೇಟು ತೊಳೆದರು!
ಈ ನಡುವೆ ಮಂಗಳೂರಿನ ಹಂಚಿನ ಕಾರ್ಖಾನೆಯಲ್ಲಿ ಲೆಕ್ಕ ಗುಮಾಸ್ತನಾಗಿ ಕೆಲಸ. ಆವಾಗಲೇ ಅವರಿಗೆ ರಾಜ್ಯ ಸರಕಾರದ ಮುಜರಾಯಿ( ದತ್ತಿ) ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಅದು 1957 ರಲ್ಲಿ.

ವಿಶುಕುಮಾರ್


ಬರವಣಿಗೆಯ ನಂಟು ಅಂಟಿದ್ದು: ಹೈಸ್ಕೂಲು ಓದುವಾಗಲೇ ಬರವಣಿಗೆಯ ನಂಟು ಹಿಡಿದದ್ದು. ಸೂಕ್ಷ್ಮಮತಿಯಾದ ವಿಶುಕುಮಾರ್, ತನ್ನ ಸಮಾಜದ ಅಂಕು-ಡೊಂಕುಗಳನ್ನು ಗಮನಿಸುತ್ತಿದ್ದರು. ತನ್ನ ಅಭಿಪ್ರಾಯ, ಅನಿಸಿಕೆಗಳನ್ನು ಲೇಖನಗಳ ಮೂಲಕ ಇಳಿಸಲು ಹೊರಟರು. ಇದು ಅವರಿಗೆ ಉತ್ತಮ ಸಾಧನವಾಯಿತು. ತನ್ನ ನಿಜ ಹೆಸರಿನಲ್ಲಿ ಲೇಖನಗಳನ್ನು ಬರೆಯಲು ಅವರಿಗೆ ಹಿಂಜರಿಕೆ. ಆಗ ಕಾವ್ಯ ನಾಮ ಹುಟ್ಟಿಕೊಂಡಿದ್ದು!
ಮದರಾಸಿನ ” ಚಂದಮಾಮ” ಮಕ್ಕಳ ಮಾಸ ಪತ್ರಿಕೆಗೆ ‘ ದುಷ್ಟ ಶಾಸನ ‘ ಎಂಬ ಕಥೆಯನ್ನು ‘ ಸುಶರ’ ಹೆಸರಲ್ಲಿ ಕಳುಹಿಸಿದ್ದರು. ಅದು ಅಲ್ಲಿ ಪ್ರಕಟವಾಯಿತು. ಅದು ಅವರ ಮೊದಲ ಕಥೆ. ವಿಶುಕುಮಾರ್ ಅದನ್ನು ನೋಡಿ ಬಹಳ ಸಂಭ್ರಮ ಪಟ್ಟರು. ( ಇಲ್ಲಿ ಒಂದು ಮಾತು ‘ ಚಂದಮಾಮ’ ದ ಬಗ್ಗೆ ಹೇಳಲು ಇಚ್ಛೆ ಪಡುತ್ತೇನೆ. ಕನ್ನಡ ‘ ಚಂದಮಾಮ’ ದ ಮೂಲ ತೆಲುಗು ಚಂದಮಾಮ. ತೆಲುಗು ಚಂದಮಾಮದಲ್ಲಿ ಪ್ರಕಟವಾದ ಕಥೆಗಳನ್ನು ಕನ್ನಡ ‘ ಚಂದಮಾಮ’ ಕ್ಕೆ ಅನುವಾದಿಸುತ್ತಾರೆ. ಈ ಕೆಲಸವನ್ನು ‘ ನವಗಿರಿನಂದ’ ಮಾಡುತ್ತಿದ್ದರು. ಅವರ ಮೂಲ ಹೆಸರು ರಂಗರಾವ್. ಅವರು ಉಡುಪಿ ಜಿಲ್ಲೆಯ ಹೊಸಬೆಟ್ಟಿನವರು. ಕನ್ನಡದಲ್ಲಿ ಕಥೆಗಳು ಬಂದಿದ್ದರೆ, ಆಯ್ಕೆ ಮಾಡಿ ‘ ಚಂದಮಾಮ’ ದಲ್ಲಿ ಪ್ರಕಟಿಸುತ್ತಿದ್ದರು) .
ಆ ನಂತರ ವಿಶುಕುಮಾರ್ ” ಸುದರ್ಶನ” ಹೆಸರಿನಲ್ಲೂ ಕಥೆಗಳನ್ನು ಬರೆಯುತ್ತಿದ್ದರು. ‘ ಶಕುಂತಲಾ- ದುಷ್ಯಂತ’ ನಾಟಕವನ್ನು ಹೈಸ್ಕೂಲ್ ನಲ್ಲಿರುವಾಗಲೇ ಬರೆದು, ಗೆಳೆಯರ ಜತೆಗೂಡಿ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಿದ್ದರು. ಇದು ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ನಾಟಕದಲ್ಲಿ ದುಷ್ಯಂತನ ಪಾತ್ರವನ್ನು ಮಾಡಿ, ಪ್ರಶಸ್ತಿಯನ್ನು ಕೂಡ ಪಡೆದರು.
” ಮಿಸ್ಟರ್ ಬಾಂಬೆ” ಎಂಬ ತುಳು ನಾಟಕವನ್ನು ಬರೆದು, ಶಾಲೆಯಲ್ಲಿ ಪ್ರದರ್ಶನ ಕಂಡು, ಭಾರೀ ಮೆಚ್ಚುಗೆ ಪಡೆದರು.


ಬಹುಮುಖ ಪ್ರತಿಭೆ: ಏನೋ ಗೊತ್ತಿಲ್ಲ. ವಿಶುಕುಮಾರ್ ಗೆ ಎಲ್ಲಾ ಕಲೆಯಲ್ಲೂ ಕಲಿಯಲು ಆಸಕ್ತಿ. ತಂದೆಯಿಂದ ಬಂದ ರಕ್ತಗುಣವಿರಬೇಕು. ಕಲಿಕೆಯ ಬಗ್ಗೆ ಪ್ರಯತ್ನವನ್ನು ಕೂಡ ಪಡುತ್ತಿದ್ದರು. ಅದರಲ್ಲಿ ಹಿಂಜರಿಕೆಯಿರುತ್ತಿರಲಿಲ್ಲ. ಸಂಗೀತದಲ್ಲೂ ಆಸಕ್ತಿ. ಹಾಡುತ್ತಿದ್ದರು. ಮಂಗಳೂರಿನ ಬೊಕ್ಕಪಟ್ಣದ ಕಾಂತಪ್ಪ ಮಾಸ್ಟರ್ ಅವರಿಂದ ತಬಲಾ, ಕೊಳಲು, ಹಾರ್ಮೋನಿಯಂ, ವಯೋಲಿನ್ ಕಲಿತು ಪರಣತಿ ಸಂಪಾದಿಸಿದ್ದರು.
ಹಾಗೇ ಮಂಗಳೂರಿನ ನೃತ್ಯ ಶಿಕ್ಷಕ ವಿಠಲ್ ಮಾಸ್ಟರ್ ರಿಂದ ಭರತನಾಟ್ಯವನ್ನು ಕಲಿತರು. ಅಲ್ಲಿ ಏರ್ಪಡಿಸಿದ ಪ್ರದರ್ಶನಗಳಲ್ಲಿ ಪಾಲುಗೊಂಡು ಮೆಚ್ಚುಗೆ ಗಳಿಸಿದರು! ಈ ವಿಠಲ್ ಮಾಸ್ಟರ್ ನಟಿ ಕಲ್ಪನಾ ಅವರ ಗುರು ಕೂಡ ಆಗಿದ್ದರು!
ವಿಶುಕುಮಾರ್ ಅಭಿರುಚಿ ಒಂದೇ ಎರಡೇ – ಚಿತ್ರಕಲೆಯಲ್ಲೂ ಆಸಕ್ತಿ. ರೇಖಾಚಿತ್ರ ಬಿಡಿಸುತ್ತಿದ್ದರು. ಸ್ವಲ್ಪ ಸಮಯ ಶಿಲ್ಪ ಚಿತ್ರ ಬಿಡಿಸಲು ಕಲಿಯಲು ಪ್ರಯತ್ನ ಪಟ್ಟರು. ಚಿತ್ರಕಲೆಗೆ ಸೀತಮ್ಮ ಎಂಬ ಟೀಚರ್ ಅವರಿಗೆ ಗುರುವಾಗಿದ್ದರು.
ಇದೆಲ್ಲಾ ಕಲಾಸಕ್ತಿಯಾದರೇ- ಹೊರಗಡೆ ಮೈದಾನದಲ್ಲೂ ವಿಶುಕುಮಾರ್ ಮುಂದು! ಉತ್ತಮ ಕ್ರಿಕೆಟು ಪಟು. ಮಂಗಳೂರಿನ ಆಸುಪಾಸುಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿದ್ದರೆ, ತಮ್ಮ ತಂಡವನ್ನು ಕೊಂಡು ಹೋಗಿ ಭಾಗವಹಿಸಿ, ಗೆದ್ದು ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಇಂಥ ವಿಶುಕುಮಾರ್ – ಗುಣ ಸ್ವಭಾವ ಹೇಗೆಂದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ” ನಮ್ಮ ಅಣ್ಣಾ …ತುಂಬಾ ಒಳ್ಳೆಯವನು. ಶಾಂತ ಸ್ವಭಾವದವನು. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ನಮ್ಮೊಡನೆ ತುಂಬಾ ಪ್ರೀತಿಯಿತ್ತು. ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು .ಪೋಕರಿ, ಕೀಟಲೆ ಅಂಥ ಸ್ವಭಾವವಿರಲಿಲ್ಲ” ಎನ್ನುತ್ತಾರೆ ಅವರ ಸಹೋದರಿಯರು.
ಇದಕ್ಕೆ ಒತ್ತುಕೊಡುತ್ತಾರೆ ಅವರ ಸಹೋದರ ಬಿ. ದಾಮೋದರ ನಿಸರ್ಗ ಕೂಡ. ದಾಮೋದರ ನಿಸರ್ಗ ಅವರು, ವಿಶುಕುಮಾರ್ ನಿರ್ದೇಶನದ ” ಕರಾವಳಿ” ಹಾಗೂ ” ಅಖಂಡ ಬ್ರಹ್ಮಚಾರಿ”- ಚಿತ್ರಗಳ ನಿರ್ಮಾಪಕರೂ ಆಗಿದ್ದಾರೆ. ” ಅಣ್ಣಾ ಶಾಂತ ಸ್ವಭಾವದವರು. ಬಾಲ್ಯದಲ್ಲಿ ಯಾರ ತಂಟೆಗೂ ಹೋಗುತ್ತಿರಲಿಲ್ಲ ” ಎನ್ನುತ್ತಾರೆ.
ಹಾಗಾದರೆ, ವಿಶುಕುಮಾರ್ ‘ ಕಾಂಟ್ರವರ್ಸಿ ‘ ಬರವಣಿಗೆಗೆ ಹೇಗೆ ಇಳಿದರು. ನಮ್ಮ ಮುಂದಿನ ಪ್ರಶ್ನೆಗೆ- ದಾಮೋದರ ಉತ್ತರ:
ತುಂಬಾ ಯೋಚಿಸಿ, ನಿಧಾನವಾಗಿ ಹೇಳಿದರು :
” ಸುತ್ತಲಿನ ಸಮಾಜವೇ ಕಾರಣ. ಅಣ್ಣಾ ಬಹಳ ಸೂಕ್ಷ್ಮವಾಗಿ ಅವನ್ನೆಲ್ಲಾ ಗಮನಿಸುತ್ತಾರೆ. ‘ ಭಗವಂತನ ಆತ್ಮಕಥೆ ‘ ಅವರು ಬರೆದ ಒಂದು ಕಾದಂಬರಿ ಇದಕ್ಕೆ ಉತ್ತಮ ಉದಾಹರಣೆ. ರಾಜ್ಯ ಸರಕಾರದ ‘ ದತ್ತಿ ಇಲಾಖೆ’ ಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ದೇವಾಲಯಗಳ ಆಡಳಿತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರಗಳ ಬಗ್ಗೆ ನೊಂದು ಬರೆದ ಸತ್ಯ ಘಟನೆಗಳೇ ಅವರ ಕಾದಂಬರಿಗಳ ಮೂಲವಸ್ತುಗಳು ” ಎಂದು ಹೇಳಿದರು.
ನಿಜ.
ವಿಶುಕುಮಾರ್ ರ ಒಬ್ಬ ಆತ್ಮ ಸ್ನೇಹಿತರೊಬ್ಬರು ನನ್ನಲ್ಲಿ ಹೇಳಿದರು: ” ನೋಡುವಾಗ, ದುರಹಂಕಾರದ ಹಾಗೇ ಕಂಡು ಬಂದರೂ ತಂದೆ ದೋಗ್ರ ಪೂಜಾರಿಯವರ ಒಳ್ಳೆ ಗುಣಗಳು ವಿಶುಕುಮಾರರಲ್ಲಿ ಬಳುವಳಿಯಾಗಿ ಬಂದಿದೆ ” ಎಂದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ : 01 ನವೆಂಬರ್ 2026
ಸ್ಥಳ : ಯಕ್ಷಗಾನ ಕಲಾರಂಗ ಉಡುಪಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಉಡುಪಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ

ಯುವವಾಹಿನಿ ಕ್ರೀಡೋತ್ಸವ–2026 : ಪಣಂಬೂರು ಕುಳಾಯಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕೃಷಿಸಿರಿ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ಸಂದರ್ಭದಲ್ಲಿ...

Sunday, 11-10-2026
ಕ್ರೀಡಾ ಸ್ಫೂರ್ತಿ, ಶಿಸ್ತು ಹಾಗೂ ಸಂಘಟನಾ ಶಕ್ತಿಯ ಅನಾವರಣ

ಯುವವಾಹಿನಿ ಕ್ರೀಡೋತ್ಸವ–2026ಕ್ಕೆ ಸಂಭ್ರಮದ ತೆರೆ

ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ...

Sunday, 04-10-2026
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
error: Content is protected !!