ಮಂಗಳೂರು ಅ 20 : ಪ್ರತೀ ವರ್ಷ ಕುದ್ರೋಳಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯುವ ನವರಾತ್ರಿಯ ಸಂಭ್ರಮದ ಸಂದರ್ಭ ನಮ್ಮ ಘಟಕದ ವತಿಯಿಂದ ಸ್ವಯಂ ಸೇವೆಯು ಪ್ರತೀ ದಿನ ಸಂಜೆ 6 ರಿಂದ ತಡರಾತ್ರಿ ವರೆಗೆ ಜವಾಬ್ದಾರಿಯುತವಾಗಿ ನೆರವೇರಿತು.

ದಿನಾಂಕ: 11-10-2026 ರಿಂದ 20-10-2026 ರವರೆಗೆ ನಡೆದ ದಸರಾ ಹಬ್ಬದ ಪ್ರಯುಕ್ತ ಮಂಗಳೂರು ಘಟಕದ ವತಿಯಿಂದ ಕುದ್ರೋಳಿ ದೇವಸ್ಥಾನದಲ್ಲಿ 10 ದಿನದ ಸ್ವಯಂಸೇವೆಯು ಪ್ರತೀ ದಿನ ಸಂಜೆ 6 ರಿಂದ ತಡರಾತ್ರಿ ವರೆಗೆ ಘಟಕದ ಹೆಚ್ಚಿನ ಸದಸ್ಯರ ಸಹಕಾರದಿಂದ ನಡೆದಿರುತ್ತದೆ.
ಈ ಕಾರ್ಯಕ್ರಮದ ಸಂಚಾಲಕರಾದ ಒಂದನೇ ಉಪಾಧ್ಯಕ್ಷರು ಯತೀಶ್ ಬಳಂಜ ಹಾಗೂ ಸಹ ಸಂಚಾಲಕರಾದ ಸತೀಶ್ ಕೆ, ಮಾಜಿ ಅಧ್ಯಕ್ಷರಾದ ಗಣೇಶ್ ವಿ ಕೋಡಿಕಲ್, ಹರೀಶ್ ವಿ ಪಚ್ಚನಾಡಿ, ನವೀನ್ ಚಂದ್ರ ಪೂಜಾರಿ ಅವರ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಸ್ವಯಂಸೇವೆ ಹಾಗೂ ಅನ್ನದಾನ ಸೇವೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹11,111/- ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರಿಗೆ ಹಸ್ತಾಂತರಿಸಲಾಯಿತು.
ಈ ಸೇವಾ ಕಾರ್ಯದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂ ಸೇವೆ ಮಾಡಿದ್ದು ದಿನಾಂಕ: 20-10-2026 ರಂದು ಶಾರದಾ ಮಾತೆಯ ಸನ್ನಿಧಿಯಲ್ಲಿ ಅನುಗ್ರಹ ಪತ್ರ ಮತ್ತು ಪ್ರಸಾದ ಸ್ವೀಕರಿಸಿ ಶಾರದಾ ಮಾತೆಯ ಆಶೀರ್ವಾದ ಪಡೆಯಲಾಯಿತು.







