ಮುಲ್ಕಿ ಅ 20 : ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ದಿನಾಂಕ 20-10-2026ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಘಟಕದ ಮಾಜಿ ಅಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಯಲ್ಲಿಯೂ ಘಟಕದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರದ ಅನ್ನದಾನ ಸೇವೆಗಾಗಿ ಘಟಕದ ಸರ್ವ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಲಾದ ₹33,500/- (ಮೂವತ್ತಮೂರು ಸಾವಿರದ ಐನೂರು ರೂಪಾಯಿ) ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರಿಗೆ ಹಸ್ತಾಂತರಿಸಲಾಯಿತು.
ಧಾರ್ಮಿಕ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಯುವವಾಹಿನಿ ಮೂಲ್ಕಿ ಘಟಕದ ಈ ಸೇವಾ ಕಾರ್ಯವು ಶ್ಲಾಘನೀಯವಾಗಿದೆ. ದಸರಾ ಮಹೋತ್ಸವದ ಅನ್ನದಾನ ಸೇವೆಗೆ ಉದಾರವಾಗಿ ಸಹಕರಿಸಿದ ಘಟಕದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸೇವಾಭಾವನೆ ಅಭಿನಂದನಾರ್ಹವಾಗಿದೆ.







