ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 28-09-2026 ರಂದು ಸಂಜೆ ನಡೆಯಿತು.

ಈ ವಾರದ ಭಜನಾ ಸೇವೆ ಶ್ರೀ ನಾಗಬ್ರಹ್ಮ ಭಜಕಾ ವೃಂದ ಕೋಡಿಕಲ್ ಇವರ ಸಹಯೋಗದಲ್ಲಿ ನೆರವೇರಿತು. ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು.
ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಭಜನಾ ತಂಡದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.
ಮಂಗಳೂರು ಘಟಕದ ಅಧ್ಯಕ್ಷರು ಹರೀಶ್ ಕೆ ಸುವರ್ಣ, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ನಿರ್ದೇಶಕರಾದ ಗೋಪಾಲ ಪೂಜಾರಿ, ನಾರಾಯಣ ಗುರು ತತ್ವ ಆದರ್ಶಗಳ ನಿಕಟಪೂರ್ವ ನಿರ್ದೇಶಕರಾದ ಪೂವಪ್ಪ ಕುಕ್ಯಾನ್, ಮಾಜಿ ಅಧ್ಯಕ್ಷರಾದ ಹರೀಶ್ ವಿ ಪಚ್ಚನಾಡಿ ಹಾಗೂ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.








