Yuvavahini

SEP 01, 2026 5.52 PM IST

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಯುವವಾಹಿನಿ ಕ್ರೀಡೋತ್ಸವ–2026 : ನಿಯಮಾವಳಿ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 4, 2026ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಯುವವಾಹಿನಿ ಕ್ರೀಡೋತ್ಸವ–2026ರ ನಿಯಮಾವಳಿ ಈ ಕೆಳಗಿನಂತಿದೆ.

ಅರ್ಹತೆ ಮತ್ತು ಸದಸ್ಯತ್ವ
1) ಯುವವಾಹಿನಿ ಕ್ರೀಡೋತ್ಸವ–2026 ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾದ ಅಂತರ್‌ಘಟಕ ಕ್ರೀಡಾಕೂಟವಾಗಿದೆ.
2) ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ನಿಗದಿತ ಅವಧಿಯೊಳಗೆ ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿರುವ ಹಾಗೂ ಕೇಂದ್ರ ಸಮಿತಿಯಿಂದ ಅನುಮೋದಿಸಲ್ಪಟ್ಟ ಹಾಗೂ ಸದಸ್ಯತ್ವ ಸಂಖ್ಯೆಯನ್ನು ಹೊಂದಿರುವ ಅರ್ಹ ಸದಸ್ಯರಾಗಿರಬೇಕು
3) ಘಟಕದಲ್ಲಿ ಸದಸ್ಯತ್ವ ಶುಲ್ಕ ಪಾವತಿಸಿದ್ದರೂ, ಕೇಂದ್ರ ಸಮಿತಿಯಿಂದ ಸದಸ್ಯತ್ವ ಸಂಖ್ಯೆ ರಚನೆಯಾಗದ ಸದಸ್ಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
4) ಕೇಂದ್ರ ಸಮಿತಿ ನೀಡುವ ಅರ್ಹ ಸದಸ್ಯರ ಪಟ್ಟಿಯಲ್ಲಿರುವ ಸದಸ್ಯರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸದಸ್ಯರು ತಮ್ಮ ಸದಸ್ಯತ್ವದ ಸ್ಥಿತಿಯನ್ನು samparka.yuvavahini.in ಸಂಪರ್ಕ ಜಾಲತಾಣದಲ್ಲಿ ಮೊಬೈಲ್ ಸಂಖ್ಯೆ ಹಾಗೂ OTP ಮೂಲಕ ಪರಿಶೀಲಿಸಿಕೊಳ್ಳಬಹುದು.
5) ಪ್ರತಿಯೊಬ್ಬ ಸದಸ್ಯರೂ ತಾವು ಸದಸ್ಯತ್ವ ಹೊಂದಿರುವ ಘಟಕದ ಪರವಾಗಿ ಮಾತ್ರ ಸ್ಪರ್ಧಿಸಬೇಕು.
6) ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಸಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
7) ಅರ್ಹ ಸದಸ್ಯತ್ವವನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸಮಿತಿಯ ವತಿಯಿಂದ ಪ್ರತಿಯೊಬ್ಬ ಸ್ಪರ್ಧಾಳುವಿಗೆ “ಗುರುತು” ನೀಡಲಾಗುವುದು. ಕ್ರೀಡಾಕೂಟದ ಯಾವುದೇ ಹಂತದಲ್ಲಿ ಕೇಂದ್ರ ಸಮಿತಿ ಹಾಗೂ ತೀರ್ಪುಗಾರರ ತಂಡವು ಈ ಗುರುತನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತದೆ. ಗುರುತು ಹೊಂದಿರದ ಅಥವಾ ಪರಿಶೀಲನೆಗೆ ಸಹಕರಿಸದ ಸ್ಪರ್ಧಿಯನ್ನು ಅನರ್ಹಗೊಳಿಸುವ ಹಕ್ಕನ್ನು ಕೇಂದ್ರ ಸಮಿತಿ ಕಾಯ್ದಿರಿಸಿದೆ.

ನೋಂದಣಿ ಮತ್ತು ವೇಳಾಪಟ್ಟಿ
8) ಗುಂಪು ಹಾಗೂ ವೈಯಕ್ತಿಕ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 26-09-2026, ಸಂಜೆ 5.00 ಗಂಟೆಯ ಒಳಗಡೆ
9) ಪ್ರತಿಯೊಂದು ಘಟಕವೂ ನಿಗದಿತ ನಮೂನೆಯಲ್ಲಿ ಸ್ಪರ್ಧಾಳುಗಳ ಹೆಸರು, ಜನ್ಮ ದಿನಾಂಕ ಹಾಗೂ ಸದಸ್ಯತ್ವ ಸಂಖ್ಯೆಯನ್ನು ನಮೂದಿಸಿ ಘಟಕದ ಅಧ್ಯಕ್ಷರ ಸಹಿಯೊಂದಿಗೆ ಕೇಂದ್ರ ಸಮಿತಿಗೆ ಸಲ್ಲಿಸಬೇಕು.
10) ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ವಯಸ್ಸನ್ನು ಅಕ್ಟೋಬರ್ 4, 2026 ದಿನಾಂಕಕ್ಕೆ ಸರಿಹೊಂದುವಂತೆ ಪರಿಗಣಿಸಲಾಗುವುದು.
11) ವೈಯಕ್ತಿಕ ಸ್ಪರ್ಧೆಯ ಪ್ರತಿಯೊಂದು ವಯೋಮಾನದ ಅರ್ಹತೆಯನ್ನು ಪೂರೈಸುವ ಸ್ಪರ್ಧಿಗಳ ಹೆಸರನ್ನು ಮಾತ್ರ ಘಟಕಗಳು ನೋಂದಾಯಿಸಬೇಕು.
12) ಸದಸ್ಯತ್ವ ಸಂಖ್ಯೆ, ವಯಸ್ಸು ಹಾಗೂ ಅರ್ಹ ಸದಸ್ಯತ್ವವನ್ನು ಪರಿಶೀಲಿಸುವ ಉದ್ದೇಶದಿಂದ, ನಿಗದಿತ ದಿನಾಂಕದ ಒಳಗಡೆ ಹೆಸರು ನೊಂದಾಯಿಸಲು ತಿಳಿಯಪಡಿಸಲಾಗಿದೆ

ಸ್ಪರ್ಧಾ ವಿಭಾಗಗಳು

ಗುಂಪು ಸ್ಪರ್ಧೆಗಳು : ಪುರುಷರ ವಿಭಾಗ

1) ವಾಲಿಬಾಲ್
2) ಹಗ್ಗಜಗ್ಗಾಟ

    ಗುಂಪು ಸ್ಪರ್ಧೆಗಳು : ಮಹಿಳೆಯರ ವಿಭಾಗ

    1) ತ್ರೋಬಾಲ್
    2) ಹಗ್ಗಜಗ್ಗಾಟ

    ವೈಯಕ್ತಿಕ ಸ್ಪರ್ಧೆಗಳು : ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

    18 ರಿಂದ 35 ವರ್ಷ : ಪುರುಷ ಹಾಗು ಮಹಿಳಾ ಪ್ರತ್ಯೇಕ ವಿಭಾಗ
    ಗುಂಡೆಸೆತ
    100 ಮೀ. ಓಟ
    200 ಮೀ. ಓಟ
    4 × 100 ಮೀ. ರಿಲೇ

    35 ರಿಂದ 50 ವರ್ಷ : ಪುರುಷ ಹಾಗು ಮಹಿಳಾ ಪ್ರತ್ಯೇಕ ವಿಭಾಗ
    ಗುಂಡೆಸೆತ
    100 ಮೀ. ಓಟ
    200 ಮೀ. ಓಟ
    4 × 100 ಮೀ. ರಿಲೇ

    50 ರಿಂದ 60 ವರ್ಷ : ಪುರುಷ ಹಾಗು ಮಹಿಳಾ ಪ್ರತ್ಯೇಕ ವಿಭಾಗ
    ಗುಂಡೆಸೆತ
    100 ಮೀ. ಓಟ

    60 ವರ್ಷ ಮೇಲ್ಪಟ್ಟವರು : ಪುರುಷ ಹಾಗು ಮಹಿಳಾ ಪ್ರತ್ಯೇಕ ವಿಭಾಗ
    ವೇಗ ನಡಿಗೆ ಸ್ಪರ್ಧೆ
    50 ಮೀ. ಓಟ

    ಗುಂಪು ಸ್ಪರ್ಧೆಗಳ ನಿಯಮಗಳು
    13) ಗುಂಪು ಸ್ಪರ್ಧೆಗಳ ವೇಳಾಪಟ್ಟಿಯನ್ನು 27-09-2026ರಂದು ನಡೆಯುವ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ ಚೀಟಿ ಎತ್ತುವ ಮೂಲಕ (Lots) ಅಂತಿಮಗೊಳಿಸಲಾಗುವುದು. ನಂತರ ಸಂಬಂಧಿಸಿದ ಎಲ್ಲಾ ಘಟಕಗಳಿಗೆ ಅಧಿಕೃತವಾಗಿ ತಿಳಿಸಲಾಗುವುದು.
    14) ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸುವ ಆಟಗಾರರ ಸಂಖ್ಯೆ:
    ವಾಲಿಬಾಲ್: 6 + 3
    ತ್ರೋಬಾಲ್: 7 + 3
    ಹಗ್ಗಜಗ್ಗಾಟ: 7 + 2
    15) ವಾಲಿಬಾಲ್ ಹಾಗೂ ತ್ರೋಬಾಲ್ ಸ್ಪರ್ಧೆಗಳಲ್ಲಿ ರೊಟೇಶನ್ ಇರುವುದಿಲ್ಲ.
    16) ಓರ್ವ ಸ್ಪರ್ಧಾಳು ಒಂದಕ್ಕಿಂತ ಹೆಚ್ಚು ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
    17) ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
    18) ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
    19) ವೈಯಕ್ತಿಕ ವಿಭಾಗದ ಸ್ಪರ್ಧೆಗಳಿಗೆ : ಒಂದು ವಯೋಮಾನದ ಒಂದು ವೈಯಕ್ತಿಕ ಸ್ಪರ್ಧೆಯಲ್ಲಿ, ಒಂದು ಘಟಕದಿಂದ ಗರಿಷ್ಠ 3 ಸ್ಪರ್ಧಿಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
    ಉದಾಹರಣೆ – 100 ಮೀಟರ್ ಓಟ:
    ಮಹಿಳೆಯರು – ಗರಿಷ್ಠ 3 ಸ್ಪರ್ಧಿಗಳು
    ಪುರುಷರು – ಗರಿಷ್ಠ 3 ಸ್ಪರ್ಧಿಗಳು
    20) ರಿಲೇ ಸ್ಪರ್ಧೆಗಳಿಗೆ ಮೇಲಿನ 3 ಸ್ಪರ್ಧಿಗಳ ನಿಯಮ ಅನ್ವಯಿಸುವುದಿಲ್ಲ. ಒಂದು ಘಟಕದಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ಆ ತಂಡದಲ್ಲಿ 4 ಸ್ಪರ್ಧಿಗಳು ಇರಬೇಕು. ಅಂದರೆ, 100 ಮೀಟರ್ ಓಟದಲ್ಲಿ 3 ಪುರುಷರು + 3 ಮಹಿಳೆಯರು ಭಾಗವಹಿಸಬಹುದು. ಆದರೆ ರಿಲೇಯಲ್ಲಿ ಒಂದು ಘಟಕದಿಂದ 4 ಜನರ ಒಂದು ತಂಡ ಮಾತ್ರ ಭಾಗವಹಿಸಬಹುದು.

    ಶಿಸ್ತು ಮತ್ತು ಸಮಯಪಾಲನೆ
    21) ಪ್ರತಿಯೊಂದು ಘಟಕಕ್ಕೆ ಹಾಗೂ ಸ್ಪರ್ಧೆಗೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸ್ಪರ್ಧಾಳುಗಳು ಹಾಜರಾಗಬೇಕು.
    22) ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಸ್ಪರ್ಧೆಯ ಸಮಯವನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ.
    23) ನಿಗದಿತ ಸಮಯಕ್ಕೆ ಸ್ಪರ್ಧಾಳು ಅಥವಾ ತಂಡ ಹಾಜರಾಗದಿದ್ದಲ್ಲಿ, ಆ ಸ್ಪರ್ಧಾಳು/ತಂಡವನ್ನು ಅನರ್ಹಗೊಳಿಸುವ ಅಧಿಕಾರ ತೀರ್ಪುಗಾರರು ಹಾಗೂ ಕೇಂದ್ರ ಸಮಿತಿಗೆ ಇರುತ್ತದೆ.
    24) ಕ್ರೀಡಾಕೂಟದ ಸ್ಪರ್ಧೆಗಳು ನಿಗದಿತ ವೇಳಾಪಟ್ಟಿಯಂತೆ ಬೆಳಿಗ್ಗೆಯಿಂದಲೇ ಆರಂಭವಾಗಲಿವೆ. ಎಲ್ಲಾ ಘಟಕಗಳು ಸಮಯಪಾಲನೆಗೆ ವಿಶೇಷ ಆದ್ಯತೆ ನೀಡಬೇಕು.
    25) ಸ್ಪರ್ಧೆಯ ಸಂದರ್ಭದಲ್ಲಿ ಯುವವಾಹಿನಿ ಗುರುತಿನ ಚೀಟಿ ಧರಿಸುವುದು ಕಡ್ಡಾಯವಲ್ಲ. ಆದರೆ ಕೇಂದ್ರ ಸಮಿತಿ ನೀಡುವ “ಗುರುತು” ಪ್ರತಿಯೊಬ್ಬ ಸ್ಪರ್ಧಾಳುವಿನಲ್ಲಿರುವುದು ಕಡ್ಡಾಯ.
    26) “ಗುರುತು” ಇಲ್ಲದ ಸ್ಪರ್ಧಾಳುವಿಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

    ಪಥಸಂಚಲನ
    27) ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಘಟಕಗಳ ಸದಸ್ಯರು ಹಾಗೂ ಸ್ಪರ್ಧಾಳುಗಳು ಸೇರಿ ಕನಿಷ್ಟ 25 ಸದಸ್ಯರ ಉಪಸ್ಥಿತಿ ಹಾಗೂ ಸಮವಸ್ತ್ರದೊಂದಿಗೆ, ಕೇಂದ್ರ ಸಮಿತಿ ಒದಗಿಸುವ ಘಟಕದ ಬ್ಯಾನರ್ ಹಾಗೂ ಧ್ವಜದೊಂದಿಗೆ ಬೆಳಿಗ್ಗೆ 9.00 ಗಂಟೆಗೆ ನಡೆಯುವ ಪಥಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು
    28) ಪಥಸಂಚಲನದಲ್ಲಿ ಭಾಗವಹಿಸದ ಘಟಕಗಳಿಗೆ ಯಾವುದೇ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
    29) ಪಥಸಂಚಲನದಲ್ಲಿ ಭಾಗವಹಿಸಿದ ಸದಸ್ಯರ ಸಂಖ್ಯೆ, ಶಿಸ್ತು, ಸಮಯಪಾಲನೆ, ಸಮವಸ್ತ್ರ, ಘಟಕದ ಬ್ಯಾನರ್ ಹಾಗೂ ಧ್ವಜದ ಬಳಕೆ ಸೇರಿದಂತೆ ಒಟ್ಟಾರೆ ನಿರ್ವಹಣೆಯನ್ನು ತೀರ್ಪುಗಾರರು ಮೌಲ್ಯಮಾಪನ ಮಾಡಲಿದ್ದಾರೆ

    ಸಮಗ್ರ ಪ್ರಶಸ್ತಿ
    30) ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಗಳಿಸಿದ ಅಂಕಗಳು, ಶಿಸ್ತಿನ ಘಟಕದ ಅಂಕಗಳು ಹಾಗೂ ಪಥಸಂಚಲನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ‘ಸಮಗ್ರ ಪ್ರಶಸ್ತಿ’ ನೀಡಲಾಗುವುದು.
    31) ಸಮಗ್ರ ಪ್ರಶಸ್ತಿಗೆ ಸಂಬಂಧಿಸಿದ ಅಂಕಗಳ ಹಂಚಿಕೆ ಹಾಗೂ ಮೌಲ್ಯಮಾಪನ ವಿಧಾನವನ್ನು ಕೇಂದ್ರ ಸಮಿತಿಯು ಪೂರ್ವಭಾವಿಯಾಗಿ ನಿಗದಿಪಡಿಸಿ ಸಂಬಂಧಿಸಿದ ಘಟಕಗಳಿಗೆ ತಿಳಿಸುತ್ತದೆ.

    ಊಟೋಪಚಾರ
    32) ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಕೆಳಗಿನಂತೆ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು:
    ಉಪಾಹಾರ: ಬೆಳಿಗ್ಗೆ 8.00ರಿಂದ 11.00ರವರೆಗೆ
    ಭೋಜನ: ಮಧ್ಯಾಹ್ನ 12.30ರಿಂದ 3.00ರವರೆಗೆ
    ಲಘು ಉಪಾಹಾರ: ಅಪರಾಹ್ನ 3.30ಕ್ಕೆ

    ಬಹುಮಾನಗಳು
    33) ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ಘಟಕಗಳಿಗೆ ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
    34) ಪಥಸಂಚಲನದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ಘಟಕಗಳಿಗೆ ನಗದು ಹಾಗೂ ಶಾಶ್ವತ ಫಲಕ ಪುರಸ್ಕಾರ ನೀಡಲಾಗುವುದು.
    35) ವೈಯಕ್ತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು.

    ಶಿಸ್ತು ಕ್ರಮ
    36) ಕ್ರೀಡಾಕೂಟದ ಸಂದರ್ಭದಲ್ಲಿ ಸಮಯಪಾಲನೆ, ನಿಯಮಾವಳಿ ಅಥವಾ ತೀರ್ಪುಗಾರರ ತೀರ್ಪಿನ ಕುರಿತು ಅನಗತ್ಯವಾಗಿ ಆಕ್ಷೇಪ ವ್ಯಕ್ತಪಡಿಸುವುದು, ಗೊಂದಲ ಸೃಷ್ಟಿಸುವುದು ಅಥವಾ ಕ್ರೀಡಾಕೂಟದ ಶಿಸ್ತಿಗೆ ಧಕ್ಕೆ ತರುವ ವರ್ತನೆ ತೋರಿಸುವ ಘಟಕ/ಸ್ಪರ್ಧಾಳುವಿನ ವಿರುದ್ಧ ಕೇಂದ್ರ ಸಮಿತಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರುತ್ತದೆ.
    37) ಅಗತ್ಯವಿದ್ದಲ್ಲಿ ಅಂತಹ ಘಟಕ/ಸ್ಪರ್ಧಾಳುವನ್ನು ಸ್ಪರ್ಧೆಯಿಂದ ಅಮಾನತುಗೊಳಿಸುವ ಅಥವಾ ಅನರ್ಹಗೊಳಿಸುವ ಹಕ್ಕನ್ನು ಕೇಂದ್ರ ಸಮಿತಿ ಕಾಯ್ದಿರಿಸಿದೆ.

    ಅನರ್ಹತೆ
    38) ಸ್ಪರ್ಧಾಳುವಿನ ಸದಸ್ಯತ್ವ, ವಯಸ್ಸು, ಹೆಸರು ಅಥವಾ ಇತರ ಯಾವುದೇ ಮಾಹಿತಿಗೆ ಸಂಬಂಧಿಸಿದಂತೆ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿರುವುದು ಪತ್ತೆಯಾದಲ್ಲಿ, ಅಂತಹ ಸ್ಪರ್ಧಾಳುವನ್ನು ಯಾವುದೇ ಪೂರ್ವ ಸೂಚನೆ ನೀಡದೆ ಅನರ್ಹಗೊಳಿಸಲಾಗುವುದು.
    39) ತಪ್ಪು ಮಾಹಿತಿಯ ಆಧಾರದ ಮೇಲೆ ಭಾಗವಹಿಸಿದ ತಂಡದ ಫಲಿತಾಂಶವನ್ನು ಸಹ ರದ್ದುಪಡಿಸುವ ಅಧಿಕಾರ ಕೇಂದ್ರ ಸಮಿತಿಗೆ ಇರುತ್ತದೆ.
    40) ನಕಲಿ ಸದಸ್ಯತ್ವ, ಮತ್ತೊಬ್ಬರ ಹೆಸರಿನಲ್ಲಿ ಸ್ಪರ್ಧಿಸುವುದು ಅಥವಾ ಸದಸ್ಯತ್ವದ ನಿಯಮಗಳನ್ನು ಉಲ್ಲಂಘಿಸುವುದು ಗಂಭೀರ ಉಲ್ಲಂಘನೆಯಾಗಿ ಪರಿಗಣಿಸಲಾಗುವುದು.

    ಶಿಸ್ತಿನ ಘಟಕ ಪುರಸ್ಕಾರ
    41) ಕ್ರೀಡಾಕೂಟದ ದಿನದಂದು ಶಿಸ್ತು, ಸಮಯಪಾಲನೆ, ಸಮವಸ್ತ್ರ, ಪಥಸಂಚಲನ, ಸಂಘಟನಾ ಸಾಮರ್ಥ್ಯ ಹಾಗೂ ಒಟ್ಟಾರೆ ಉತ್ತಮ ಭಾಗವಹಿಸುವಿಕೆ ಪ್ರದರ್ಶಿಸುವ ಘಟಕಕ್ಕೆ ಶಿಸ್ತಿನ ಘಟಕ ಪುರಸ್ಕಾರ ನೀಡಲಾಗುವುದು.
    42) ಈ ಕುರಿತು ಕೇಂದ್ರ ಸಮಿತಿಯ ನಿಯೋಜಿಸುವ ತೀರ್ಪುಗಾರರ ತಂಡವು ಕ್ರೀಡಾಕೂಟದ ದಿನದಂದು ಗೌಪ್ಯವಾಗಿ ಮೌಲ್ಯಮಾಪನ ನಡೆಸಲಿದೆ.

    ಸಾಮಾನ್ಯ ನಿಯಮಗಳು

    43) ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಘಟಕಗಳು ಹಾಗೂ ಸ್ಪರ್ಧಾಳುಗಳು ಈ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
    44) ಕ್ರೀಡಾಕೂಟದ ಸುಸೂತ್ರ ನಿರ್ವಹಣೆಗೆ ರಚಿಸಲಾಗಿರುವ ಕೇಂದ್ರ ಸಮಿತಿಯ ನಿರ್ವಹಣಾ ಸಮಿತಿಯ ಸೂಚನೆಗಳನ್ನು ಎಲ್ಲಾ ಘಟಕಗಳು ಹಾಗೂ ಸ್ಪರ್ಧಾಳುಗಳು ಕಡ್ಡಾಯವಾಗಿ ಪಾಲಿಸಬೇಕು.
    45) ಕ್ರೀಡಾಕೂಟದ ಸುಸೂತ್ರ ನಿರ್ವಹಣೆ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಅಗತ್ಯವಿದ್ದಲ್ಲಿ ನಿಯಮಗಳಲ್ಲಿ ಕೊನೆಯ ಕ್ಷಣದಲ್ಲಿ ಸೂಕ್ತ ಬದಲಾವಣೆ ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ಕೇಂದ್ರ ಸಮಿತಿ ಕಾಯ್ದಿರಿಸಿದೆ.
    46) ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಸಂಘಟಕರು, ತೀರ್ಪುಗಾರರು ಹಾಗೂ ಕೇಂದ್ರ ಸಮಿತಿಯ ನಿರ್ವಹಣಾ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಎಲ್ಲರೂ ಅದನ್ನು ಗೌರವಿಸಿ ಪಾಲಿಸಬೇಕು.

    ಸಂಪರ್ಕ
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    ಶಂಕರ್ ಎ. ಕೋಟ್ಯಾನ್
    ಕ್ರೀಡಾ ನಿರ್ದೇಶಕರು
    ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು
    ಮೊ.: 97429 72689

    ಮನವಿ
    ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಪ್ರೀತಿಯ ಆತಿಥ್ಯವನ್ನು ಸ್ವೀಕರಿಸಿ, ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಯುವವಾಹಿನಿ ಕ್ರೀಡೋತ್ಸವ–2026ರ ಯಶಸ್ಸಿಗೆ ಎಲ್ಲಾ ಘಟಕಗಳು, ಸದಸ್ಯರು ಹಾಗೂ ಸ್ಪರ್ಧಾಳುಗಳು ಸಹಕಾರ ನೀಡಬೇಕೆಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯು ಕಳಕಳಿಯಿಂದ ಮನವಿ ಮಾಡುತ್ತದೆ.

    ಪ್ರಧಾನ ಕಾರ್ಯದರ್ಶಿ
    ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು.

    Leave a Reply

    Your email address will not be published. Required fields are marked *

    ಸಂಪರ್ಕಿಸಿ : +91 94484 63345
    yuvavahinicentral@gmail.com

    ಮುಂದಿನ ಕಾರ್ಯಕ್ರಮಗಳು

    ದಿನಾಂಕ :
    ಸ್ಥಳ :

    ದಿನಾಂಕ : 2026ನೇ ಸೆಪ್ಟೆಂಬರ್ 6 ಬೆಳಗ್ಗೆ 11 ಗಂಟೆಗೆ
    ಸ್ಥಳ : ಮೂಡುಮಾರ್ನಾಡು, ಮೂಡುಬಿದಿರೆ

    ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ

    ದಿನಾಂಕ : 2026ನೇ ಅಗಸ್ಟ್16 ಬೆಳಗ್ಗೆ ಗಂಟೆ 09.30 ರಿಂದ
    ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬಿ.ಸಿ.ರೋಡ್

    ಯುವವಾಹಿನಿ (ರಿ) ಬಂಟ್ವಾಳ ಘಟಕದ ನಿರೆಲ್‌ಡ್

    ದಿನಾಂಕ : 2026ನೇ ಅಗಸ್ಟ್ 23
    ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

    ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ

    ದಿನಾಂಕ :
    ಸ್ಥಳ :

    ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

    ಜಾಹೀರಾತುಗಳು
    ಪ್ರಮುಖ ಕಾರ್ಯಕ್ರಮ
    ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

    ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

    ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

    Sunday, 19-04-2026
    ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

    ಸವಿನೆನಪಿನ ಸಿಂಚನದ ನಮನ

    ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

    Sunday, 19-04-2026
    ಯುವವಾಹಿನಿ ಡೆನ್ನಾನ ಡೆನ್ನನ : 2026

    ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

    ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

    Sunday, 19-04-2026
    ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

    ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

    ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

    Saturday, 14-03-2026
    ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

    ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

    ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

    Sunday, 21-12-2025
    error: Content is protected !!