ಪೆರ್ಮಂಕಿ ಅಗಸ್ಟ್ 28: ಯುವವಾಹಿನಿ (ರಿ.) ಪೆರ್ಮಂಕಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಗುರುಜಯಂತಿಯ ಪ್ರಯುಕ್ತ ಪೆರ್ಮಂಕಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಗುರುಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಪೆರ್ಮಂಕಿ ಘಟಕದ ನಾರಾಯಣ ಗುರುತತ್ವ ಪ್ರಚಾರ ನಿರ್ದೇಶಕರಾದ ಕೀರ್ತಿರಾಜ್ ಕರಂದಾಡಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ತತ್ವಾದರ್ಶಗಳು ಹಾಗೂ ಸಮಾಜಕ್ಕೆ ಅವರು ಸಾರಿದ ಸಂದೇಶಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಶಶಿಕುಮಾರ್ ಕರಂದಾಡಿ, ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಬಜಿಲೊಟ್ಟು, ಕೋಶಾಧಿಕಾರಿ ರೇಶ್ಮಾ ಪೆರ್ಮಂಕಿ, ಉಪಾಧ್ಯಕ್ಷರಾದ ನಾಗೇಶ್ ಬಜಿಲೊಟ್ಟು, ಮಂದಿರದ ಅರ್ಚಕರಾದ ರುಕ್ಮಯ್ಯ, ಗಂಗಾಧರ್ ಪೆರ್ಮಂಕಿ ಸೇರಿದಂತೆ ಘಟಕದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.


