ಕಡಬ ಅಗಸ್ಟ್ 28 : ಕಡಬ ತಾಲೂಕು ಕಚೇರಿ ಹಾಗೂ ನಾಡಹಬ್ಬಗಳ ಸಮಿತಿ, ಕಡಬ ತಾಲೂಕು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಕಾರ್ಯಕ್ರಮವು ಶುಕ್ರವಾರ ಆಡಳಿತ ಸೌಧ, ಕಡಬದಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ಅಧ್ಯಕ್ಷ ಉಮೇಶ್ ಬಲ್ಪ, ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಶಿವಪ್ರಸಾದ್ ನೂಚಿಲ, ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಅಮೈ ಹಾಗೂ ಪ್ರಶಾಂತ್ ಎನ್.ಎಸ್., ಉಪಾಧ್ಯಕ್ಷೆ ಸರಿತಾ ಉಂಡಿಲ, ಬಿಲ್ಲವ ಪ್ರಮುಖರಾದ ಅಭಿಲಾಷ್ ಪಿ.ಕೆ., ಮಹಿಳಾ ವೇದಿಕೆ ಅಧ್ಯಕ್ಷೆ ಜಯಂತಿ ನಂದೋಳಿ, ಗೀತಾ ಉಂಡಿಲ ಹಾಗೂ ಸುವರ್ಣ ಉಂಡಿಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಭಿಲಾಷ್ ಪಿ.ಕೆ. ಹಾಗೂ ಕೃಷ್ಣಪ್ಪ ಅಮೈ ಅವರು ಶುಭ ಹಾರೈಸಿದರು. ಉದಯ ನೆಟ್ಟಣ ಸ್ವಾಗತಿಸಿ, ಗೋಪಾಲ್ ಕಲ್ಲುಗುಡ್ಡೆ ವಂದಿಸಿದರು.


