ಯುವವಾಹಿನಿ (ರಿ) ಕೊಲ್ಯ ಘಟಕದ ನೇತೃತ್ವದಲ್ಲಿ ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಧರ್ಮ ಶಿಕ್ಷಣ ತರಗತಿಯಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಈ ತಿಂಗಳ ಪ್ರತಿ ಮಂಗಳವಾರ ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ದಲ್ಲಿ ನಡೆಸಲಾಯಿತು.

ಮೊದಲ ವಾರ ಆಟಿ ತಿಂಗಳ ಮಹತ್ವ, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ರಸಪ್ರಶ್ನೆ ನಡೆಸಲಾಯಿತು. 2 ನೇ ವಾರದಲ್ಲಿ ಧರ್ಮ ಶಿಕ್ಷಣ ಶಿಕ್ಷಾರ್ಥಿಗಳು ತುಳು ಕನ್ನಡ ಗೀತೆಗಳನ್ನು ತರಗತಿಯಲ್ಲಿ ಹಾಡಿದರು. 3 ನೇ ವಾರದಲ್ಲಿ ಸ್ವರಚಿತ ತುಳು ಕವನ ರಚಿಸಿ ಶಿಕ್ಷಾರ್ಥಿಗಳು ತರಗತಿಯಲ್ಲಿ ಕವನ ವಾಚಿಸಿದರು. 4 ನೇ ವಾರದಲ್ಲಿ ತುಳುನಾಡು ಹಬ್ಬಗಳ ಬಗ್ಗೆ, ಆಹಾರ ಪದ್ಧತಿಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ನಡೆಸಲಾಯಿತು. ಧರ್ಮ ಶಿಕ್ಷಣ ತರಗತಿಯ ಮುಖ್ಯ ಗುರುಗಳಾದ ಡಾ. ಅರುಣ್ ಉಳ್ಳಾಲ ಇವರ ನೇತೃತ್ವದಲ್ಲಿ ಪ್ರತಿ ವಾರ ಆಟಿ ತಿಂಗಳ ವಿಶೇಷದ ಬಗ್ಗೆ ಮಕ್ಕಳಿಗೆ ವಿವರಿಸಲಾಯಿತು. ಧರ್ಮ ಶಿಕ್ಷಣ ತರಗತಿಯಲ್ಲಿ ಮೊದಲು ನಿತ್ಯಾನುಷ್ಠಾನ ಶ್ಲೋಕ , ಭಗವದ್ಗೀತೆ ಪಠಣ ನಂತರ ಆಟಿ ತಿಂಗಳ ವಿಶೇಷ ತರಗತಿಗಳನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರದ ಭಜನಾ ಸಂಚಾಲಕರಾದ ಜಗಜೀವನ್ ಕೊಲ್ಯ, ಯತೀಶ್ ವೆಂಕುಹಿತ್ಲು ಉಪಸ್ತಿತರಿದ್ದರು. ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ತರಗತಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಿ ತಿಂಗಳ ಮಹತ್ವದ ಬಗ್ಗೆ ಜ್ಞಾನವನ್ನು ಪಡೆದರು.


